ಭಾರತ ಹಾಗೂ ಅಮೆರಿಕಾದ ನಡುವೆ ವ್ಯಾಪಾರ-ವಾಣಿಜ್ಯ ಒಪ್ಪಂದಕ್ಕೆ ಮಾತುಕತೆಗಳು ನಡೆಯುತ್ತಿವೆ. ಭಾರತದ ವಾಣಿಜ್ಯ ಇಲಾಖೆ ಅಧಿಕಾರಿಗಳು ಹಾಗೂ ಅಮೆರಿಕಾದ ವಾಣಿಜ್ಯ ಇಲಾಖೆ ಅಧಿಕಾರಿಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆಯುತ್ತಿವೆ.
2030 ರ ವೇಳೆಗೆ 500 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಮತ್ತು ಬಲಪಡಿಸುವ ಗುರಿಯನ್ನು ಹೊಂದಿರುವ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರಮುಖ ಚರ್ಚೆಯು ಹೈನುಗಾರಿಕೆ ಮತ್ತು ಕೃಷಿಯ ಬಗ್ಗೆ ಬಿಕ್ಕಟ್ಟನ್ನು ತಲುಪಿದೆ.
ಭಾರತದ ಡೈರಿ ಹಾಗೂ ಕೃಷಿ ವಲಯಕ್ಕೆ ಎಂಟ್ರಿಯಾಗಲು ಅಮೆರಿಕಾ ಪ್ಲಾನ್ ಮಾಡಿದೆ. ನಾನ್ ವೆಜ್ ಹಸುಗಳ ಹಾಲನ್ನು ಭಾರತಕ್ಕೆ ರಫ್ತು ಮಾಡಲ್ಲ ಎಂದು ಭರವಸೆ ಕೊಡಬೇಕು ಎಂದು ಭಾರತ ಪಟ್ಟು ಹಿಡಿದಿದೆ. ಜೊತೆಗೆ ಹಸುವಿನ ಹಾಲು ಬಗ್ಗೆ ಸರ್ಟಿಫಿಕೇಟ್ ಬೇಕೆಂದು ಭಾರತ ಬೇಡಿಕೆ ಇಟ್ಟಿದೆ. ಭಾರತಕ್ಕೆ ಪೂರೈಕೆಯಾಗುವ ಹಾಲು, ನಾನ್ ವೆಜ್ ಹಸುವಿನ ಹಾಲು ಅಲ್ಲ ಎಂಬ ಸರ್ಟಿಫಿಕೇಟ್ ಬೇಕೆಂದು ಭಾರತ ಕೇಳುತ್ತಿದೆ.
ಅಮೆರಿಕಾದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಈ ನಾನ್ ವೆಜ್ ಹಸುಗಳು ಬೇರೆ ಹಸುಗಳ ರಕ್ತವನ್ನು ಸಹ ಕುಡಿಯುತ್ತವೆ. ಜೊತೆಗೆ ಅಮೆರಿಕಾದ ಹಸುಗಳು ಮಾಂಸ ತಿನ್ನುತ್ತವೆ. ಹೀಗಾಗಿ ಇವುಗಳನ್ನು ನಾನ್ ವೆಜ್ ಹಸುಗಳು ಅಂತಾನೇ ಕರೆಯಲಾಗುತ್ತೆ. ನಾನ್ ವೆಜ್ ಹಸುಗಳ ಹಾಲನ್ನು ಅಮೆರಿಕಾ ಭಾರತಕ್ಕೆ ರಫ್ತು ಮಾಡಲು ಬಯಸಿದೆ. ಆದರೆ ಭಾರತದಲ್ಲಿ ಹಸುವಿನ ಹಾಲಿಗೆ ಭಾರಿ ಪಾವಿತ್ರ್ಯತೆ ಇದೆ. ಹಸುವನ್ನು ಗೋ ಮಾತೆ ಎಂದು ಭಾರತದಲ್ಲಿ ಜನರು ಪೂಜಿಸುತ್ತಾರೆ. ಹಸುವಿನ ಹಾಲು ಬಗ್ಗೆ ಶ್ರದ್ದೆ, ಭಕ್ತಿ, ಗೌರವ ಇದೆ. ದೇವರ ನೈವೇದ್ಯಕ್ಕೂ ಶುದ್ದ ಹಸುವಿನ ಹಾಲು ಬಳಕೆ ಮಾಡಲಾಗುತ್ತೆ. ಹಸುವಿನ ಹಾಲಿನ ಜೊತೆ ಧಾರ್ಮಿಕ, ಸಾಂಸ್ಕೃತಿಕ ನಂಬಿಕೆಗಳಿವೆ. ಹೀಗಾಗಿ ಇಂಥ ದೇಶಕ್ಕೆ ನಾನ್ ವೆಜ್ ಹಸುಗಳ ಹಾಲು ರಫ್ತು ಮಾಡಲು ಅಮೆರಿಕಾ ಹೊರಟಿದೆ. ಆದರೆ ಇದಕ್ಕೆ ಕೇಂದ್ರದ ಮೋದಿ ಸರ್ಕಾರ ಒಪ್ಪಿಲ್ಲ. ಹೀಗಾಗಿ ಭಾರತ- ಅಮೆರಿಕಾ ನಡುವೆ ವ್ಯಾಪಾರ-ವಾಣಿಜ್ಯ ಒಪ್ಪಂದ ಏರ್ಪಟ್ಟಿಲ್ಲ.
ನಾನ್ ವೆಜ್ ಹಸುಗಳ ಹಾಲನ್ನು ಭಾರತಕ್ಕೆ ರಫ್ತು ಮಾಡಲು ಭಾರತದ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಭಾರತ- ಅಮೆರಿಕಾ ವ್ಯಾಪಾರ ವಾಣಿಜ್ಯ ಒಪ್ಪಂದ ಕಗ್ಗಂಟಾಗಿದೆ.
ಹೈನುಗಾರಿಕೆಗೆ ಮಣಿಯಲು ಭಾರತ ಬಲವಾಗಿ ನಿರಾಕರಿಸಿದೆ. ಈ ಉದ್ಯಮವು 1.4 ಬಿಲಿಯನ್ ವ್ಯಕ್ತಿಗಳನ್ನು ಪೋಷಿಸುತ್ತದೆ ಮತ್ತು 80 ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ, ಹೆಚ್ಚಾಗಿ ಸಣ್ಣ ಪ್ರಮಾಣದ ರೈತರಿಗೆ. “ಹೈನುಗಾರಿಕೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅದು ಕೆಂಪು ರೇಖೆ” ಎಂದು ಜುಲೈನಲ್ಲಿ ಸರ್ಕಾರದ ಉನ್ನತ ಮೂಲವನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.