ಆಕ್ಸಿಯಮ್-4 ಮಿಷನ್ ಯಶಸ್ವಿಯಾಗಿ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಬಂದಿಳಿದ್ದಾರೆ. ಭಾರತೀಯ ಕಾಲಮಾನ ಮಧ್ಯಾಹ್ನ 3.01 ನಿಮಿಷಕ್ಕೆ ಕ್ಯಾಲಿಪೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಸ್ಪೇಸ್ ಎಕ್ಸ್ ಟ್ರ್ಯಾಗನ್ ಬಂದಿಳಿಯಿತು.
ಇದೇ ವೇಳೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ಶುಭಾಂಶು ಶುಕ್ಲಾ ಬದಲಿಗೆ ದಲಿತ ಗಗನಯಾನಿಯೊಬ್ಬನನ್ನು ಕಳಿಸಬೇಕಿತ್ತು ಎನ್ನುವ ಮೂಲಕ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
ರಾಕೇಶ್ ಶರ್ಮಾ ಅವರನ್ನ ಕಳಿಸಿದಾಗ ಎಸ್‌ಸಿ, ಎಸ್‌ಟಿ, ಒಬಿಸಿ ಜನರು ಅಷ್ಟೊಂದು ವಿದ್ಯಾವಂತರಾಗಿರಲಿಲ್ಲ. ಈ ಬಾರಿ ದಲಿತರನ್ನ ಕಳಿಸುವ ಸರದಿ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾಸಾ, ಪರೀಕ್ಷೆ ನಡೆಸಿ ಶುಭಾಂಶು ಶುಕ್ಲಾರನ್ನ ಆಯ್ಕೆ ಮಾಡಿಲ್ಲ, ಶುಕ್ಲಾ ಬದಲಿಗೆ ಯಾವುದೇ ದಲಿತ ಅಥವಾ ಒಬಿಸಿಯನ್ನ ಕಳುಹಿಸಬಹುದಿತ್ತು ಎಂದಿದ್ದಾರೆ.
ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ ಮೊದಲ ಭಾರತೀಯ. 1984 ಏಪ್ರಿಲ್‌ನಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಇಂಟರ್ ಕಾಸ್ಕೋಸ್ ಕಾರ್ಯಕ್ರಮದ ಭಾಗವಾಗಿ ಹೋಗಿದ್ದರು. ಅದಾದ ಬಳಿಕ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳಸಿದ 2ನೇ ಭಾರತೀಯ ಶುಭಾಂಶು ಶುಕ್ಲಾ.
ಸ್ಪೇಸ್ ಎಕ್ಸ್, ನಾಸಾ ಸಹಭಾಗಿತ್ವದ ಆಕ್ಸಿಯಮ್-4 ಮಿಷನ್ ಪೈಲಟ್ ಆಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಶುಭಾಂಶು ಶುಕ್ಲಾ, 18 ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿದ್ದು ಅಧ್ಯಯನ ಮಾಡಿದ್ದಾರೆ.