pashupathi
ದೇಶ

ರಾಜಸ್ಥಾನದಲ್ಲಿ 4,500 ವರ್ಷ ಹಿಂದಿನ ನಾಗರಿಕತೆ ಕುರುಹು

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ: ರಾಜಸ್ಥಾನದ ಡೀಗ್ ಜಿಲ್ಲೆಯ ಬಹಜ್ ಗ್ರಾಮದಲ್ಲಿ ಪುರಾತತ್ವ ಇಲಾಖೆಯ ಉತ್ಪನನ ನಡೆಸುತ್ತಿದ್ದು, ಈ ವೇಳೆ 4,500 ವರ್ಷಗಳ ಹಿಂದಿನ ನಾಗರಿಕತೆಯ ಕುರುಹುಗಳು ಹಾಗೂ ಸರಸ್ವತಿ ನದಿಯ ಇರುವಿಕೆಯ ಕುರುಹುಗಳು ಪತ್ತೆಯಾಗಿವೆ. 23 ಮೀಟರ್ ಆಳಕ್ಕೆ ಈ ಉತ್ಪನನ ಇದೀಗ ತಲುಪಿದ್ದು, ರಾಜಸ್ಥಾನದಲ್ಲಿ ಇಲ್ಲಿಯವರೆಗೆ ನಡೆದ ಅತಿ ಆಳದ ಉತ್ಪನನ ಇದಾಗಿದೆ.

akshaya college

ಸನಾತನ ಸಂಸ್ಕೃತಿಯಲ್ಲಿನ ಸಪ್ತ ಪವಿತ್ರ ನದಿಗಳಲ್ಲಿ ಒಂದಾದ ಸರಸ್ವತಿ ನದಿಯು ಜೀವಂತವಾಗಿತ್ತು ಎನ್ನುವುದಕ್ಕೆ ಈಗ ಕುರುಹುಗಳು ಪತ್ತೆಯಾಗಿವೆ. 2024ರ ಜ.10ರಿಂದಲೂ ಪುರಾತತ್ವ ಇಲಾಖೆ ಇಲ್ಲಿ ಉತ್ಪನನ ನಡೆಸುತ್ತಿದೆ. ಈ ಉತ್ಪನನದಲ್ಲಿ ಮಹಾಭಾರತ, ಹರಪ್ಪ ನಂತರದ, ಮೌರ್ಯ, ಗುಪ್ತ, ಕುಶಾಣರ ಕಾಲದ ಸಾಕ್ಷ್ಯಗಳು ದೊರೆತಿವೆ.

ಈ ಕಾಲಘಟ್ಟಗಳ ಕುಂಬಾರಿಕೆ ವಸ್ತುಗಳು, ಬ್ರಾಹ್ಮ ಲಿಪಿಯ ಪುರಾತನ ಮುದ್ರೆಗಳು, ಯಜ್ಞ ಕುಂಡ, ಮೌರ್ಯರ ಕಾಲದ ಶಿಲ್ಪ, ತಾಮ್ರದ ನಾಣ್ಯಗಳು, ಶಿವ-ಪಾರ್ವತಿಯ ಮೂರ್ತಿಗಳು, ಮೂಳೆಗಳಿಂದ ಮಾಡಿದ ಸಾಧನಗಳು ಸೇರಿ 800ಕ್ಕೂ ಹೆಚ್ಚು ವಸ್ತುಗಳನ್ನು ಇಲ್ಲಿ ಸಿಕ್ಕಿರುವುದಾಗಿ ಪುರಾತತ್ವ ಇಲಾಖೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts