Gl
ದೇಶ

ಬಂದರಿನಲ್ಲೇ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ; ಸಂಕಷ್ಟದಲ್ಲಿ ವ್ಯಾಪರಿಗಳು!!

ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರತದ ಅಕ್ಕಿ ರಪ್ತಿನ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರತದ ಅಕ್ಕಿ ರಪ್ತಿನ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಇರಾನ್‌ಗೆ ರಫ್ತಾಗಬೇಕಿದ್ದ ಸುಮಾರು 1 ಲಕ್ಷ ಟನ್ ಬಾಸ್ಮತಿ ಅಕ್ಕಿ ಭಾರತದ ಬಂದರುಗಳಲ್ಲೇ ಉಳಿದಿದೆ ಎಂದು ಅಖೀಲ ಭಾರತ ಅಕ್ಕಿ ರಫ್ತುದಾರರ ಸಂಘ ಸೋಮವಾರ ತಿಳಿಸಿದೆ.

akshaya college

ಸೌದಿ ಅರೇಬಿಯಾದ ನಂತರ ಭಾರತದಿಂದ ಅತಿಹೆಚ್ಚು ಬಾಸ್ಮತಿ ಅಕ್ಕಿ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿರುವ ಇರಾನ್, ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 10 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ಭಾರತದಿಂದ ತರಿಸಿಕೊಂಡಿತ್ತು. ಆದರೆ ಪ್ರಸ್ತುತ ಇರಾನ್‌ನಲ್ಲಿನ ಸಂಘ -ರ್ಷದಿಂದಾಗಿ, ಇರಾನ್‌ಗೆ ಭಾರತ ರಫ್ತು ಮಾಡುವ ಶೇ.18-20ರಷ್ಟು ಬಾಸ್ಮತಿ ಅಕ್ಕಿಯು ಇಲ್ಲೇ ಉಳಿಯುವಂತಾಗಿದೆ ಎಂದು ರಫ್ತುದಾರರು ತಿಳಿಸಿದ್ದಾರೆ.

ಅಕ್ಕಿ ಹೊತ್ತ ಹಡಗುಗಳು ಗುಜರಾತ್‌ನ ಕಾಂಡ್ಲಾ ಹಾಗೂ ಮುಂಡ್ರಾ ಬಂದರಿನಲ್ಲೇ ಠಿಕಾಣಿ ಹೂಡಿದ್ದು, ಸಂಘರ್ಷ ಜಾರಿಯಲ್ಲಿರುವುದರಿಂದ ಈ ಸರಕಿಗೆ ವಿಮೆ ಅನ್ವಯ ವಾಗುವುದಿಲ್ಲ. ಈ ಅನಿಶ್ಚಿತತೆಯಿಂದಾಗಿ ರಫ್ತುದಾರರು ನಷ್ಟದ ಭೀತಿಯಲ್ಲಿದ್ದು, ಈಗಾಗಲೇ ದೇಶೀಯ ಬಾಸ್ಮತಿ ಅಕ್ಕಿ ಬೆಲೆಯಲ್ಲಿ ಕೇಜಿಗೆ 4ರಿಂದ 5 ರೂ. ಕಡಿಮೆ ಯಾಗಿರುವುದನ್ನು ಉಲ್ಲೇಖಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts