ದೇಶ

ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ: ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಮುಗಿದಿಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

akshaya college

ಒಂದೆಡೆ ಪಾಕಿಸ್ತಾನವು ಭಿಕ್ಷೆ ಬೇಡಿದ ಕಾರಣ ಭಾರತ ಕದನ ವಿರಾಮ ಘೋಷಣೆ ಮಾಡಿದೆ. ಆದರೆ, ಇನ್ನೊಂದೆಡೆ ಪ್ರಧಾನಿಯವರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎನ್ನುವ ಮೂಲಕ ಉಗ್ರರನ್ನು ನಾಶ ಮಾಡಿಯೇ ಸಿದ್ಧ ಎಂದು ಮತ್ತೊಮ್ಮೆ ಗುಡುಗಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶ ಮಾಡುವ ಮೂಲಕ ನಮ್ಮ ಸೇನೆಯು ಮಹತ್ವದ ಸಾಧನೆ ಮಾಡಿದೆ. ಇದರೊಂದಿಗೆ ಪಾಕಿಸ್ತಾನ ಸೇನೆಯು ಯುದ್ಧವನ್ನು ನಿಲ್ಲಿಸುವಂತೆ ಬೇಡಿಕೊಳ್ಳಬೇಕಾಯಿತು. ಹಾಗಾಗಿ, ಸೇನೆಯ ಈ ಶೌರ್ಯಕ್ಕೆ ನಾನು ನಮಸ್ಕರಿಸುತ್ತೇನೆ! ಜೊತೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಬೇಡಿಕೊಳ್ಳುತ್ತಿದ್ದ ಶತ್ರು ರಾಷ್ಟ್ರವು ಯಾವುದೇ ಭ್ರಮೆಯಲ್ಲಿರಬಾರದು. ಯಾಕೆಂದರೆ ಈ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದರು.

ಇದರೊಂದಿಗೆ, ಮುಂದೆಯೂ ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಭಾರತ ಸೂಕ್ತ ಪ್ರತ್ಯುತ್ತರ ನೀಡುತ್ತದೆ ಎಂದ ಅವರು, ಪ್ರತಿಕ್ರಿಯಿಸುವ ಸಮಯ, ವಿಧಾನ ಮತ್ತು ಪರಿಸ್ಥಿತಿಗಳನ್ನು ನಮ್ಮ ಸೈನ್ಯವೇ ನಿರ್ಧರಿಸುತ್ತದೆ. ಹಾಗಾಗಿ, ಭಾರತ ಇನ್ನು ಮುಂದೆ ಯಾವುದೇ ರೀತಿಯ ಪರಮಾಣು ಬಾಂಬ್ ಬೆದರಿಕೆಗೆ ಹೆದರುವುದಿಲ್ಲ. ಜೊತೆಗೆ ಇನ್ನೆಂದೂ ಭಾರತವು ಭಯೋತ್ಪಾದನೆಯ ಯಜಮಾನ ಮತ್ತು ಭಯೋತ್ಪಾದಕರನ್ನು ಪೋಷಿಸುವ ಸರ್ಕಾರವನ್ನು ಒಂದೇ ದೃಷ್ಟಿಯಿಂದ ನೋಡುತ್ತದೆ. ಹಾಗಾಗಿ, ಪಾಕಿಸ್ತಾನದ ಆಟ ಇನ್ನು ಹೆಚ್ಚು ದಿನ ನಡೆಯುವುದಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, ಕಾನ್ಪುರದಲ್ಲಿ ಹಳೆಯ ಆರ್ಡಿನೆನ್ಸ್ ಕಾರ್ಖಾನೆಗಳಂತೆ, ನಾವು 7 ಅಂತಹ ಕಾರ್ಖಾನೆಗಳನ್ನು ಆಧುನೀಕರಿಸಿದ್ದೇವೆ. ಹಾಗಾಗಿ, ಸಾಂಪ್ರದಾಯಿಕ ಕಾರ್ಖಾನೆಗಳು ಪಲಾಯನ ಮಾಡುತ್ತಿದ್ದ ಸಮಯದಲ್ಲಿ, ಈಗ ರಕ್ಷಣಾ ವಲಯದ ದೊಡ್ಡ ಕಂಪನಿಗಳು ಕಾನ್ಪುರಕ್ಕೆ ಬರುತ್ತಿವೆ. ಜೊತೆಗೆ ಹತ್ತಿರದ ಅಮೇಥಿಯಲ್ಲಿ AK 57 ತಯಾರಿಸಲಾಗುತ್ತಿದೆ. ಹಾಗಾಗಿ, ಬ್ರಹ್ಮೋಸ್‌ನ ಹೊಸ ವಿಳಾಸ ಉತ್ತರ ಪ್ರದೇಶವಾಗಿದೆ. ಇದರೊಂದಿಗೆ ದೊಡ್ಡ ಪ್ರಮಾಣದ ಹೂಡಿಕೆ ಇಲ್ಲಿಗೆ ಬರಲಿದ್ದು, ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗಲಿವೆ ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts