ದೇಶ

ಮುಂದಿನ ಪ್ರಧಾನಿ: ಅಮಿತ್‌ ಶಾ ಮಹತ್ವದ ಘೋಷಣೆ!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಚುನಾವಣೆಗಾಗಿ ರಣತಂತ್ರ ರೂಪಿಸುತ್ತಿವೆ. ಚುನಾವಣೆ ಪೂರ್ವ ಸಮೀಕ್ಷೆಗಳೂ ಪ್ರಕಟವಾಗುತ್ತಿವೆ. ಇದರ ಬೆನ್ನಲ್ಲೇ, ಅಮಿತ್‌ ಶಾ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ದೇಶದಲ್ಲಿ ಇನ್ನೂ 10 ವರ್ಷ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಆಡಳಿತ ನಡೆಸಲಿದ್ದಾರೆ” ಎಂದು ಮಾಧ್ಯಮ ಜತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.

“10 ವರ್ಷಗಳ ನಂತರ ಯಾರು ಪ್ರತಿಪಕ್ಷದಲ್ಲಿ ಇರುತ್ತಾರೆ ಎಂಬುದು ನಮ್ಮ ಸರ್ಕಾರದ ಪ್ರದರ್ಶನ, ಆಡಳಿತದ ಮೇಲೆ ನಿರ್ಧಾರವಾಗುತ್ತದೆ. ನಾವು ಉತ್ತಮ ಆಡಳಿತ ನೀಡಿದರೆ ಅಧಿಕಾರದಲ್ಲಿ ಇರುತ್ತೇವೆ. ನಾವು ಉತ್ತಮ ಆಡಳಿತ ನೀಡದಿದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಇರುತ್ತೇವೆ. ಆದರೆ, ಒಂದು ನೆನಪಿರಲಿ, ಇನ್ನೂ 10 ವರ್ಷ ನರೇಂದ್ರ ಮೋದಿ ಅವರೇ ದೇಶದ ಪ್ರಧಾನಿಯಾಗಿ ಇರುತ್ತಾರೆ. ಪ್ರತಿಪಕ್ಷಗಳು 2034ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಲಿ” ಎಂದು ಹೇಳುವ ಮೂಲಕ 2024, 2029ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

SRK Ladders

ಸಿಎಎ ಕಾಯ್ದೆ

“ಪೌರತ್ವ ತಿದ್ದುಪಡಿ ಕಾಯ್ದೆಯು (CAA) ದೇಶದ ಕಾನೂನಾಗಿದೆ. ಲೋಕಸಭೆ ಚುನಾವಣೆಗೂ ಮೊದಲೇ ದೇಶದಲ್ಲಿ ಸಿಎಎ ಜಾರಿಗೆ ಬರಲಿದೆ. ಜಾರಿಗೆ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಪಾಕಿಸ್ತಾನದಲ್ಲಿ ಲಕ್ಷಾಂತರ ಹಿಂದುಗಳು, ಸಿಖ್ಖರು, ಬೌದ್ಧರು, ಪಾರ್ಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್‌ ನಾಯಕರೇ ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ನಾವು ಇದ್ದೇವೆ ಎಂದು ಭರವಸೆ ನೀಡಿದ್ದರು. ಈಗ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಸುರಕ್ಷತೆ ಇಲ್ಲದಾಗಿದೆ. ಹಾಗಾಗಿ ನಾವು ಸಿಎಎ ಜಾರಿಗೊಳಿಸುತ್ತೇವೆ” ಎಂದು ತಿಳಿಸಿದರು.

ಪಾಕಿಸ್ತಾನದಲ್ಲಿ ನಮ್ಮದೇ ಸಹೋದರಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಅವಮಾನಕ್ಕೆ ಗುರಿ ಮಾಡಲಾಗುತ್ತಿದೆ. ಬಲವಂತವಾಗಿ ಅವರನ್ನು ಮತಾಂತರಗೊಳಿಸಲಾಗುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗಿದೆ. ಇವರಿಗೆ ನಾವಲ್ಲದೆ ಬೇರೆ ಯಾರು ರಕ್ಷಣೆ ಕೊಡಲು ಸಾಧ್ಯ? ಅವರು ನಮ್ಮ ದೇಶಕ್ಕೆ ಬಂದರೆ, ನಾವು ಅವರಿಗೆ ಪೌರತ್ವ ನೀಡುತ್ತೇವೆ. 1947ರ ಆಗಸ್ಟ್‌ 15ರಂದು ನೀಡಿದ ಮಾತನ್ನು ಉಳಿಸಿಕೊಳ್ಳುತ್ತೇವೆ” ಎಂದು ಸಂವಾದದ ವೇಳೆ ಅಮಿತ್‌ ಶಾ ಘೋಷಣೆ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts