pashupathi
ದೇಶ

ಆಪರೇಷನ್ ಸಿಂಧೂರ್: ವಿವಿಧೆಡೆ ವಿಮಾನ ಸಂಚಾರ ವ್ಯತ್ಯಯ | ವಿಮಾನ ಪ್ರಯಾಣಕ್ಕೆ ಮೊದಲು ಪ್ರಕಟಣೆ ಗಮನಿಸಲು ಸೂಚನೆ

tv clinic
ಆಪರೇಷನ್ ಸಿಂಧೂರ್ ಬೆನ್ನಿಗೇ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ವಾಯುನೆಲೆಯನ್ನು ಮುಚ್ಚಲಾಗಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಆಪರೇಷನ್ ಸಿಂಧೂರ್ ಬೆನ್ನಿಗೇ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ವಾಯುನೆಲೆಯನ್ನು ಮುಚ್ಚಲಾಗಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ.

akshaya college

ಮೂಲಗಳ ಪ್ರಕಾರ, ಇಂದು ಶ್ರೀನಗರ ವಿಮಾನ ನಿಲ್ದಾಣದಿಂದ ಯಾವುದೇ ಪ್ರಯಾಣಿಕ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ. ಇಂದಿನ ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ. ಇಂಡಿಗೊ ಏರ್​ಲೈನ್ಸ್ ಕೂಡ ಪ್ರಯಾಣ ಪ್ರಕಟಣೆ ಹೊರಡಿಸಿದೆ. ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೋ ಅಧಿಕೃತ ಪ್ರಕಟಣೆ ತಿಳಿಸಿದೆ.

ವಿಮಾನ ನಿಲ್ದಾಣ ತಲುಪುವ ಮೊದಲು ಪ್ರಯಾಣಿಕರು ಇಂಡಿಗೊದ ವೆಬ್‌ಸೈಟ್‌ನಲ್ಲಿ ಅಪ್​ಡೇಟ್​​ಗಳನ್ನು ತಿಳಿದುಕೊಂಡು ಬರಬೇಕು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಬಿಕಾನೆರ್‌ಗೆ ತೆರಳಿದ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ವೈಮಾನಿಕ ನಿರ್ಬಂಧಗಳು ಪರಿಣಾಮ ಬೀರುತ್ತವೆ ಎಂದು ಇಂಡಿಗೋ ಏರ್‌ಲೈನ್ಸ್ ಎಕ್ಸ್​ ಪೋಸ್ಟ್​​ನಲ್ಲಿ ಮಾಹಿತಿ ನೀಡಿದೆ.

ವಿಮಾನ ನಿಲ್ದಾಣಕ್ಕೆ ಬರುವ ಮೊದಲು ಏರ್​ಲೈನ್ಸ್​ನ ಅಧಿಕೃತ ವೆಬ್​ಸೈಟ್​​ನಲ್ಲಿ ಪರಿಶೀಲಿಸಲು ವಿನಂತಿಸುತ್ತೇವೆ. ಮಂಗಳವಾರ ಸಂಜೆ ಭಾರತ ಸರ್ಕಾರವು ಪಾಕಿಸ್ತಾನ ಗಡಿಯಲ್ಲಿ ವೈಮಾನಿಕ ಕಾರ್ಯಾಚರಣೆಗಾಗಿ ನೋಟಾಮ್ ಹೊರಡಿಸಿತ್ತು ಎಂದು ಇಂಡಿಗೋ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts