Gl
ದೇಶ

ಗಡ್ಡ ಬಿಟ್ಟ ಗಂಡನ ಬಿಟ್ಟು, ಮೈದುನನ ಜೊತೆ ಪರಾರಿ!

ಈ ಸುದ್ದಿಯನ್ನು ಶೇರ್ ಮಾಡಿ

ಗಡ್ಡ ಇವತ್ತಿನ ಫ್ಯಾಶನ್. ಕೆಲ ಮಹಿಳೆಯರು ಇದಕ್ಕೆ ವಿರೋಧ ವ್ಯಕ್ತಪಡಿಸುವುದೂ ಇದೆ. ಹೀಗೆ ವ್ಯಕ್ತಪಡಿಸಿದ ವಿರೋಧ ಅತಿರೇಕಕ್ಕೆ ಹೋದ ಒಂದು ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮೀರತ್’ನಲ್ಲಿ ನಡೆದಿದೆ.

rachana_rai
Pashupathi
akshaya college
Balakrishna-gowda

ಪದೇ ಪದೇ ಗಡ್ಡ ತೆಗೆಯುವಂತೆ ಮನವಿ ಮಾಡಿಕೊಂಡರೂ ತನ್ನ ಮಾತು ಕೇಳದ ಗಂಡನ ವಿರುದ್ಧ ಮುನಿಸಿಕೊಂಡ ಮಹಿಳೆಯೊಬ್ಬರು, ಗಂಡನ ತಮ್ಮನ ಜೊತೆಯೇ ಪರಾರಿಯಾದ ಘಟನೆಯಿದು.

pashupathi

ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಜೊತೆ, ಏಳು ತಿಂಗಳ ಹಿಂದೆ ಅರ್ಷಿ ಎಂಬ ಯುವತಿಯ ವಿವಾಹವಾಗಿತ್ತು. ಮದುವೆಯಾದ ಕೂಡಲೇ ಕ್ಲೀನ್ ಶೇವ್ ಮಾಡುವಂತೆ ತನಗೆ ಪತ್ನಿಯಿಂದ ಒತ್ತಡ ಎದುರಾಗಿತ್ತು ಎಂದು ಶಕೀರ್ ಹೇಳಿಕೊಂಡಿದ್ದಾರೆ.

ಕುಟುಂಬದ ಒತ್ತಡದಿಂದ ತಾನು ಆತನನ್ನು ಮದುವೆಯಾಗಿದ್ದು, ಗಡ್ಡ ತೆಗೆಯಲು ಒಪ್ಪಿದರೆ ಮಾತ್ರ ಆತನೊಂದಿಗೆ ವಾಸಿಸುವುದಾಗಿ ಅರ್ಷಿ ಹೇಳಿದ್ದಾರೆ ಎನ್ನಲಾಗಿದೆ. ಇದೇ ವಿಷಯದ ಬಗ್ಗೆ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಶಕೀರ್ ತನ್ನ ಪತ್ನಿ ಗಡ್ಡ ತೆಗೆಯುವಂತೆ ಕಿರಿಕಿರಿ ಮಾಡುತ್ತಿದ್ದಾಳೆ ಎಂದು ಆಕೆಯ ಕುಟುಂಬಕ್ಕೂ ದೂರು ನೀಡಿದ್ದಾರೆ.

ಗಡ್ಡ ತೆಗೆಯುವಂತೆ ತನ್ನ ಗಂಡನಿಗೆ ಎಷ್ಟೇ ಹೇಳಿದರೂ ಆತ ಒಪ್ಪದ ಕಾರಣ ಕ್ಲೀನ್ ಶೇವ್ ಮಾಡುತ್ತಿದ್ದ ಗಂಡನ ತಮ್ಮನತ್ತ ಅರ್ಷಿ ಆಕರ್ಷಿತಳಾಗಿದ್ದು ಇಬ್ಬರೂ ಮನೆಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಗಂಡನ ಕಿರಿಯ ಸಹೋದರನ ಜೊತೆ ಮಹಿಳೆ ಅರ್ಷಿ ಓಡಿಹೋದ ಘಟನೆ ಶಕೀರ್ ಮತ್ತು ಅವನ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಹೆಂಡತಿ ಮತ್ತು ಸಹೋದರ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ವಿಷಯದ ಬಗ್ಗೆ ಅರ್ಷಿಯ ಕುಟುಂಬಕ್ಕೆ ಕೂಡ ಮಾಹಿತಿ ನೀಡಿದ್ದಾನೆ. ಆದರೆ, ಆಕೆಯ ಕುಟುಂಬ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕೊನೆಕ್ಷಣದಲ್ಲಿ ಏರ್ ಇಂಡಿಯಾ ಹಾರಾಟ ರದ್ದು: ಮಂಗಳವಾರ ಒಂದೇ ದಿನ 7 ಪ್ರಕರಣ!! ಏರ್ ಇಂಡಿಯಾ ವಿಮಾನದಲ್ಲಿ ಹೆಚ್ಚುತ್ತಿದೆಯೇ ತಾಂತ್ರಿಕ ದೋಷ?

ಕೊನೆ ಕ್ಷಣದಲ್ಲಿ ವಿಮಾನ ಹಾರಾಟ ರದ್ದು ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಮಂಗಳವಾರ ಒಂದೇ…