ದೇಶ

ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ಹಾನ್

ದುಬೈ ರಾಜಕುಮಾರ ಶೇಖ್ ಹಮ್ಹಾನ್ ತಮ್ಮ ಮೊದಲ ಅಧಿಕೃತ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ ರಾಜಕುಮಾರ ಶೇಖ್ ಹಮ್ಹಾನ್ ತಮ್ಮ ಮೊದಲ ಅಧಿಕೃತ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದಾರೆ.

akshaya college

ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಇದೇ ಮೊದಲ ಬಾರಿ ಭಾರತಕ್ಕೆ ಆಗಮಿಸುತ್ತಿರುವ ರಾಜಕುಮಾರ, ಭೋಜನ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿ, ಸಚಿವರಾದ ಜೈಶಂಕರ್, ರಾಜನಾಥ್ ಸಿಂಗ್ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಶೇಖ್ ಹಮ್ಹಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಯೂಮ್ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಬಹಳ ಸಂತೋಷವಾಯಿತು.ನಮ್ಮ ಸಂಭಾಷಣೆ ಯುಎಇ-ಭಾರತ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ ಎಂದಿದ್ದಾರೆ.

ಭಾರತ ಮತ್ತು ದುಬೈ ನಡುವಿನ ಸಂಬಂಧ ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಉಭಯ ದೇಶಗಳಿಗೂ ಅವಕಾಶ, ನಾವೀನ್ಯತೆ ಮತ್ತು ಶಾಶ್ವತ ಸಮೃದ್ಧಿಯಿಂದ ತುಂಬಿದ ಭವಿಷ್ಯವನ್ನು ಸೃಷ್ಟಿಸುವ ದೃಷ್ಟಿಕೋನದಿಂದ ನಾವು ಭಾರತದೊಟ್ಟಿಗೆ ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ದುಬೈನ ಕ್ರೌನ್‌ ಪ್ರಿನ್ಸ್ ಶೇಖ್ ಹಮ್ಹಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಯೂಮ್ ಟ್ವಿಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts