ಪುತ್ತೂರು : ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ರಾಮಕುಂಜ, ಉಪ್ಪಿನಂಗಡಿ ಓಲ್ಡ್ ಇಂಡಸ್ಟ್ರಿಯಲ್ ಮತ್ತು ವಾಟರ್ ಸಪ್ಲೈ ಫೀಡರ್ನಲ್ಲಿ ನ. 9 (ಶನಿವಾರ) ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ನಿಲುಗಡೆ ನಡೆಯಲಿದೆ.
110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ರಾಮಕುಂಜ ಗ್ರಾಮ, ಕೊಯಿಲ ಗ್ರಾಮ, ಹಿರೇಬಂಡಾಡಿ ಗ್ರಾಮ, ಕೆಮ್ಮಿಂಜೆ, ಕೃಷ್ಣನಗರ, ಸಾಲ್ಮರ, ಬೆದ್ರಾಳ ಪಡೀಲ್ ಮತ್ತು ಜಿಡೆಕಲ್ಲು ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.