Friday, November 22
Share News

ಮೂವರನ್ನು ಬಲಿ ಪಡೆದು, ಪುಂಡಾಟ ಮೆರೆಯುತ್ತಿದ್ದ ಕಾಡಾನೆ (Elephant) ಮಕ್ನಾ ಅನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಬನ್ನೇರುಘಟ್ಟದ (Bannerughatta) ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಸಾಕಾನೆ ಭೀಮ, ಮಹೇಂದ್ರ ನೆರವಿನಲ್ಲಿ ಮಕ್ನಾ ಆನೆಯನ್ನು ಸೆರೆ ಹಿಡಿಯಲಾಗಿದೆ. ಡ್ರೋನ್ ಮೂಲಕ ಮಕ್ನಾ ಇರುವ ಸ್ಥಳ ಗುರುತಿಸಿದ್ದ ಅರಣ್ಯ ಅಧಿಕಾರಿಗಳು ನಂತರ ಮಕ್ನಾ ಆನೆಯನ್ನು ಸಾಕಾನೆಗಳು, ಮಾವುತರು ಸುತ್ತುವರೆದಿದ್ದಾರೆ. ಮಾವುತರು, ಕಾವಾಡಿಗರ ಮಾಹಿತಿ ಆಧರಿಸಿ ವೈದ್ಯರ ತಂಡ ಕೂಡ ಬಂದಿತ್ತು.

ಪಶುವೈದ್ಯ, ಶಾರ್ಪ್ಶೂಟರ್ ರಂಜನ್ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಒಂದು ಕಿ.ಮೀ. ಸಾಗಿದ್ದ ಮಕ್ನಾ ಆನೆ ನಂತರ ನಿತ್ರಾಣಗೊಂಡಿತ್ತು. ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆ ಬಿಡಾರಕ್ಕೆ ಮಕ್ನಾ ಶಿಫ್ಟ್ ಮಾಡಲಾಗಿದೆ.

ಅರಣ್ಯ ಸಿಬ್ಬಂದಿ ವಾಹನದ ಹಿಂಬಾಲಿಸಿ ದಾಳಿಗೆ ಮುಂದಾಗಿತ್ತು. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.


Share News

Comments are closed.

Exit mobile version