ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಎಷ್ಟು ಮೊತ್ತ ಇರಿಸಬೇಕು ಎಂಬುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಹೊಸ ನಿಯಮ ಜಾರಿಗೆ ತರಲಿದೆ. ಈ ನಿಯಮ ಇದೇ ತಿಂಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕರು ಉಳಿತಾಯ ಖಾತೆಯಲ್ಲಿ (Saving Account) ಒಂದು ವರ್ಷದೊಳಗೆ 10 ಲಕ್ಷ ರೂ ಅಥವಾ ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಬಹುದು. ಹಣ ಜಮೆ ಮಾಡುವಾಗ ತೆರಿಗೆ ಮತ್ತು ಶುಲ್ಕಗಳ ಬಗ್ಗೆ ನಿಮ್ಮ ಬ್ಯಾಂಕ್ನಿಂದ ತಿಳಿದುಕೊಳ್ಳುವುದು.
ಕೆಲವೊಮ್ಮೆ ಬ್ಯಾಂಕ್ಗಳು ನಿಮ್ಮ ಖಾತೆಯನ್ನು ಪರಿಶೀಲಿಸಿ ವಿಸ್ತೃತವಾದ ಮಾಹಿತಿಯನ್ನು ಕೇಳಬಹುದು. ಉಳಿತಾಯ ಖಾತೆ ಅಥವಾ ಇನ್ಯಾವುದೋ ಅಕೌಂಟ್ಗಳಲ್ಲಿ ಹಣದ ಹರಿವು ಹೆಚ್ಚಾಗುತ್ತಿದ್ರೆ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ನೋಟಿಸ್ ಸಿಗಬಹುದು. ಹಿರಿಯ ನಾಗರೀಕರು 1 ಲಕ್ಷ ರೂಪಾಯಿವರೆಗೆ ಹಣ ಉಳಿತಾಯ ಮಾಡಬಹುದು. ಈ ಹಣದ ಮೇಲೆ ಯಾವುದೇ ರೀತಿಯ ತನಿಖೆ ನಡೆಯುವುದಿಲ್ಲ.
ಇಂದು ಬ್ಯಾಂಕ್ಗಳು ಖಾತೆಯಲ್ಲಿ ಕನಿಷ್ಠ ( ₹500-₹1000)
ಬ್ಯಾಲೆನ್ಸ್ ಮೇಂಟೈನ್ (Minimum Balance Maintain) ಮಾಡದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಬಹುದಿನಗಳ ಬಳಿಕ ಖಾತೆಗೆ ಹಣ ಜಮೆ ಆದ್ರೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದ್ದಕ್ಕೆ ದಂಡ ಕಡಿತಗೊಳಿಸಲಾಗುತ್ತದೆ. ಈ ಮುಖೇನ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುತ್ತವೆ.
ಕನಿಷ್ಠ ಮೊತ್ತ ನಿರ್ವಹಣೆ ಮಾಡದ್ದಕ್ಕೆ 300 ರಿಂದ 600 ರೂಪಾಯಿವರೆಗೆ ದಂಡ ವಸೂಲಿ ಮಾಡಲಾಗುತ್ತದೆ. ದಂಡದ ಪ್ರಮಾಣ ಬ್ಯಾಂಕುಗಳಿಂದ ಬ್ಯಾಂಕಿಗೆ ಬೇರೆ ಬೇರೆಯಾಗಿರುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) 1,538 ಕೋಟಿ ರೂಪಾಯಿ ದಂಡ ವಸೂಲಿ ಮಾಡಿ ದಾಖಲೆ ಬರೆದಿದೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ (State Bank Of India) ಈ ರೀತಿಯ ದಂಡ ವಸೂಲಿ ಮಾಡಿಸೋದನ್ನು ನಿಲ್ಲಿಸಿದೆ. ಕಳೆದ ಐದು ವರ್ಷಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು (Private And Govt Banks) ಕನಿಷ್ಠ ಮೊತ್ತ ನಿರ್ವಹಣೆ ಹೆಸರಿನಲ್ಲಿ ಕೋಟಿ ಕೋಟಿ ಹಣ ತಮ್ಮದಾಗಿಸಿಕೊಂಡಿವೆ.
ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕನಿಷ್ಠ ಮೊತ್ತ ನಿರ್ವಹಣೆ ಮಾಡುವ ಕುರಿತು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ. ಹೊಸ ನಿಯಮ ಜಾರಿಗೆ ಬರುತ್ತಾ ಅಥವಾ ನಿಯಮಗಳಲ್ಲಿ ಬದಲಾವಣೆ ತರುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.