Thursday, November 21
Share News

ಮಂಗಳೂರು : ಹಲ ಕಂಬಳ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿರುವ, ಕಂಬಳ ಪ್ರೇಮಿಗಳ ಕಣ್ಮಣಿ “ಲಕ್ಕಿ’ ಕೋಣ ಸಾವನ್ನಪ್ಪಿದೆ.

ವರಪಾಡಿ ಬಡಗುಮನೆ ದಿವಾಕರ ಚೌಟ ಅವರು ಸಾಕಿದ್ದ 6 ವರ್ಷ ಪ್ರಾಯದ ಲಕ್ಕಿ, ಉದರ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಕಂಬಳದಲ್ಲಿ ಸಹಿತ ಕಳೆದ ಸೀಸನ್‌ನಲ್ಲಿ 5 ಪದಕ ಗೆದ್ದಿತ್ತು. ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದಿದ್ದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಎರಡನೇ ಬಹುಮಾನ ಲಕ್ಕಿ ಪಡೆದಿತ್ತು. ಕಕ್ಯಪದವು, ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲೂ ಲಕ್ಕಿ ಬಹುಮಾನ ಗೆದ್ದಿತ್ತು. ಬುಧವಾರ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದರು.

ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಕಿಗೆ ಜು.16ರಂದು ಕಾರ್ಕಳದಲ್ಲಿ ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್‌ ನಡೆಸಿದ್ದರು. ಬುಧವಾರ ಮತ್ತೆ ಚಿಕಿತ್ಸೆಗೆಂದು ಕಾರ್ಕಳಕ್ಕೆ ಕರೆತರಲಾಗಿದ್ದು, ಅಲ್ಲಿ ಕೊನೆಯುಸಿರೆಳೆದಿದೆ.

ಐಕಳ ಪಂಚಾಯತ್‌ ಅಧ್ಯಕ್ಷ ದಿವಾಕರ ಚೌಟ ಅವರು ಎರಡು ವರ್ಷಗಳ ಹಿಂದೆ ಲಕ್ಕಿಯನ್ನು ಭಟ್ಕಳದ ಎಚ್‌. ಎನ್‌. ನಿವಾಸದಿಂದ ತಂದಿದ್ದರು. ಕೊಂಡೊಟ್ಟು ಬೊಲ್ಲ, ತೆಗ್ಗರ್ಸೆ ಪಾಂಡು, ನಾವುಂದ ಪುಟ್ಟ, ಮಳವೂರು ರಾಜೆ ಲಕ್ಕಿಯ ಅತ್ಯಂತ ಯಶಸ್ವೀ ಜೋಡಿಯಾಗ


Share News

Comments are closed.

Exit mobile version