Friday, November 22
Share News

ಪುತ್ತೂರು: ಪುತ್ತೂರಿನ ಕುಂಬ್ರದ ಚಂದನ ಕಾಂಪ್ಲೆಕ್ಸ್ ಹಿಂಭಾಗದ ಅಮೋಘ ಕಾಂಪ್ಲೆಕ್ಸ್ ನಲ್ಲಿ ಕೃಷ್ಣಪ್ರಸಾದ್ ಕೆ.ಎಸ್ ಮಾಲಕತ್ವದ ಶ್ರೀ ಲಕ್ಸ್ಮಿ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿ ನ. 8ರಂದು ಶುಭಾರಂಭಗೊಂಡಿತು.

ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ ಉದ್ಘಾಟನೆ ನೆರವೇರಿಸಿದರು, ಚೋರ್ಲ ವಾಣಿಯರ ತರವಾಡು ಕರೋಪಾಡಿ ಇದರ ಸಂಚಾಲಕ ರಾಮಕೃಷ್ಣ ಮಾಂಬಾಡಿ ಅವರು ಯಂತ್ರಕ್ಕೆ ಚಾಲನೆ ನೀಡಿದರು.

ಚಂದನಾ ಕಾಂಪ್ಲೆಕ್ಸ್‌ ಮಾಲಕ ರಾಮ್ ಮೋಹನ್ ಉಪಸ್ಥಿತರಿದ್ದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಾಂದೀಪನಿ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್, ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ವಿಷ್ಣು ಪ್ರಸಾದ್, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಮುಂತಾದ ಗಣ್ಯರು ಭಾಗವಹಿಸಿ ಶುಭಹಾರೈಸಿದರು

ಶ್ರೀ ಲಕ್ಸ್ಮಿ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿಯಲ್ಲಿ ಎಲ್ಲಾ ತರಹದ ಮೆಣಸು ಮತ್ತು ಧಾನ್ಯಗಳನ್ನು ಹುಡಿ ಮಾಡಿ ಕೊಡಲಾಗುವುದು. ಕೃಷಿಕರಿಂದಲೇ ಖರೀದಿಸಿದ ತೆಂಗಿನ ಕಾಯಿಯಿಂದ ಸ್ವತಃ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆಯನ್ನು ನೀಡಲಾಗುವುದು ಎಂದು ಮಾಲಕ ಕೃಷ್ಣಪ್ರಸಾದ್ ಕೆ.ಎಸ್ ತಿಳಿಸಿದ್ದಾರೆ.


Share News

Comments are closed.

Exit mobile version