Wednesday, December 18
Share News

ಕೀರ್ತಿ ಸುರೇಶ್ ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಮುಂಚೂಣಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಬಹುಕಾಲದ ಗೆಳೆಯನೊಂದಿಗೆ ಗೋವಾದಲ್ಲಿ ಡಿಸೆಂಬರ್ 12 ರಂದು ಮದುವೆಯಾದರು.

ಕೀರ್ತಿ ತಮ್ಮ ದೀರ್ಘಕಾಲದ ಗೆಳೆಯ ಆಂಟನಿ ಥಟ್ಟಿಲ್ ಅವರನ್ನು ವಿವಾಹ ಅದ್ದೂರಿಯಾಗಿ ನಡೆಯಿತು.. ದುಬೈ ಮೂಲದ ಉದ್ಯಮಿಯಾಗಿರುವ ಆಂಟನಿ ಥಟ್ಟಿಲ್ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದ ಈ ವಿವಾಹವು ಗೋವಾದಲ್ಲಿ ಅದ್ದೂರಿಯಾಗಿ ನೆರವೇರಿತು. ನಟ ವಿಜಯ್, ನಟಿ ತ್ರಿಷಾ ಸೇರಿದಂತೆ ಹಲವು ಸಿನಿಮಾ ತಾರೆಯರು ಭಾಗವಹಿಸಿದ್ದರು.

ಕೀರ್ತಿ ಸುರೇಶ್ – ಆಂಟನಿ ಥಟ್ಟಿಲ್ ಅವರಿಗೆ ಅಯ್ಯಂಗಾರ್ ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ವಿವಾಹ ನೆರವೇರಿತು. ಈ ವಿವಾಹದ ಫೋಟೋಗಳು ವೈರಲ್ ಆಗಿವೆ. ಕೀರ್ತಿ ಸುರೇಶ್ ಸೀರೆಯುಟ್ಟು ಮದುಮಗಳಾಗಿ ಕಂಗೊಳಿಸುತ್ತಿದ್ದಾರೆ. ಆಂಟನಿ ವೇಷ್ಟಿ ಧರಿಸಿ ಬ್ರಾಹ್ಮಣ ವರನಂತೆ ಕಾಣಿಸಿಕೊಂಡಿದ್ದಾರೆ.

ಬ್ರಾಹ್ಮಣ ಸಂಪ್ರದಾಯದಲ್ಲಿ ವಿವಾಹವಾದ ಅದೇ ದಿನ ಸಂಜೆ ಆಂಟನಿ ಕುಟುಂಬದ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ಮತ್ತೊಮ್ಮೆ ವಿವಾಹ ನೆರವೇರಿತು. ಇದರಲ್ಲಿ ಕೀರ್ತಿ ಬಿಳಿ ಉಡುಪಿನಲ್ಲಿ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ವಿವಾಹದ ಫೋಟೋಗಳು ವೈರಲ್ ಆಗಿವೆ.


Share News

Comments are closed.

Exit mobile version