ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಮತ್ತೊಂದು ಎಡವಟ್ಟು ಮಾಡಿದ್ದು, ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿಲ್ಲ. ಅದರಲ್ಲೂ ಬಾಂಗ್ಲದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಆಯ್ಕೆಯಾದ ಮೇಲೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಪಾಕಿಸ್ತಾನದೊಂದಿಗೆ ಕೈ ಜೋಡಿಸಿರುವ ಬಾಂಗ್ಲಾದೇಶ ಭಾರತದ ರಾಜ್ಯಗಳು ಬಾಂಗ್ಲದೇಶಕ್ಕೆ ಸೇರಿದೆ ಎನ್ನುವ ಫೋಟೋವನ್ನು ಪಾಕ್‌ನೊಂದಿಗೆ ಹಂಚಿಕೊಂಡಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
2024 ಮತ್ತು 2025ನೇ ಸಾಲಿನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಸಂಬಂಧ ಹಾಳಾಗಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಈಚೆಗೆ ನಡೆದ ಯುದ್ಧದ ಸಂದರ್ಭದಲ್ಲೂ ಬಾಂಗ್ಲಾದೇಶ ಇದೇ ರೀತಿಯ ಹುಚ್ಚುತನವನ್ನು ಪ್ರದರ್ಶಿಸಿತ್ತು. ಭಾರತವೂ ಒಂದೊಮ್ಮೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಭಾರತದ ಮೇಲೆ ದಾಳಿ ಮಾಡಲಿದ್ದೇವೆ. ಈಶಾನ್ಯ ಭಾರತದ ಏಳು ರಾಜ್ಯಗಳನ್ನು ವಶ ಪಡಿಸಿಕೊಳ್ಳುವುದಕ್ಕೆ ಬಾಂಗ್ಲಾದೇಶಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಉದ್ದಟತನ ಹೇಳಿಕೆಯನ್ನು ಮುಹಮ್ಮದ್ ಯೂನಸ್ ಕೊಟ್ಟಿದ್ದರು.
ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿ ಅಧ್ಯಕ್ಷ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರು ಈಚೆಗೆ ಬಾಂಗ್ಲಾದ ಢಾಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಯೂನಸ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಭಾರತದ ಪ್ರದೇಶಗಳೂ ಸಹ ಸೇರಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಜಂಟಿ ಫೋಟೋ ಹಾಗೂ ಭಾರತದ ಪ್ರದೇಶಗಳನ್ನು ಪಾಕಿಸ್ತಾನದ ಜಂಟಿ ಫೋಟೋ ಹಾಗೂ ಭಾರತದ ಪ್ರದೇಶಗಳನ್ನು ಸೇರಿಸಿರುವ ಚಿತ್ರಗಳು ವೈರಲ್ ಆಗಿದ್ದು, ಭಾರತೀಯರು ಈ ಬೆಳವಣಿಗೆಗೆ ತಮ್ಮ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 1971ರ ವಿಮೋಚನಾ ಯುದ್ಧದ ನಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ಮುರಿದಿತ್ತು. ಈ ರೀತಿ ನೋಡಿದರೆ ಬಾಂಗ್ಲಾದೇಶವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿತ್ತು.

























