ಉಗ್ರ ನಿಗ್ರಹ ದಳದ ಗುಜರಾತ್ ಪಡೆಯು ಗುತ್ತಿಗೆ ಕೆಲಸಗಾರನನ್ನು ಬಂಧಿಸಿದ್ದು, ಆತ ಪಾಕಿಸ್ತಾನದ ಏಜೆಂಟ್ ಗೆ ಭಾರತೀಯ ಕೋಸ್ಟ್ ಗಾರ್ಡ್ (ICG) ಹಡಗುಗಳ ಚಲನವಲನದ ಬಗ್ಗೆ ಮಾಹಿತಿ ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ದೀಪೇಶ್ ಗೋಹಿಲ್ ಎಂದು ಗುರುತಿಸಲಾಗಿದೆ.
ಮಾಹಿತಿ ನೀಡುತ್ತಿದ್ದಕ್ಕೆ ಪಾಕ್ ಏಜೆಂಟ್ ಈತನಿಗೆ ಪ್ರತಿನಿತ್ಯ 200 ರೂ ನೀಡುತ್ತಿದ್ದ. ಪಾಕ್ ಏಜೆಂಟ್ ಬಳಿಯಿಂದ ದೀಪೇಶ್ ಒಟ್ಟು 42 ಸಾವಿರ ರೂ ಹಣ ಪಡೆದಿದ್ದಾನೆ.
ದೀಪೇಶ್ ಓಖಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನಿ ಗೂಢಚಾರಿಯೊಂದಿಗೆ ಫೇಸ್‌ಬುಕ್ ಮೂಲಕ ಸಂಪರ್ಕ ಹೊಂದಿದ್ದನು.
ಗೂಢಚಾರರು ‘ಸಹಿಮಾ’ ಎಂಬ ಬದಲಿ ಹೆಸರು ಬಳಸಿದ್ದು, ಫೇಸ್‌ಬುಕ್‌ನಲ್ಲಿ ದೀಪೇಶ್ ಜತೆ ಸ್ನೇಹ ಬೆಳೆಸಿದ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕದಲ್ಲಿದ್ದರು. ಓಖಾ ಬಂದರಿನಲ್ಲಿರುವ ಕೋಸ್ಟ್ ಗಾರ್ಡ್ ಬೋಟ್‌ನ ಹೆಸರು ಮತ್ತು ಸಂಖ್ಯೆಯನ್ನು ಏಜೆಂಟ್ ದೀಪೇಶ್‌ಗೆ ಕೇಳಿದ್ದರು. ಪಾಕ್ ಏಜೆಂಟ್ ನ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.