ಆರೋಗ್ಯ

ಕಾಸರಗೋಡು: ಆಸ್ಪತ್ರೆಯಲ್ಲಿ ನಿಗಾದಲ್ಲಿರುವ ವ್ಯಕ್ತಿಗೆ ಮಂಕೀಫಾಕ್ಸ್ ದೃಢ

ದುಬಾಯಿಯಿಂದ ಊರಿಗೆ ಬಂದು ಆರೋಗ್ಯ ಇಲಾಖೆಯ ಪ್ರತ್ಯೇಕ ನಿಗದಲ್ಲಿದ್ದ ವ್ಯಕ್ತಿಗೆ ಮಂಕಿಫಾಕ್ಸ್ ದೃಢೀಕರಿಸಕಲಾಗಿದೆ. ಇದರೊಂದಿಗೆ ಕಾಸರಗೋಡಿನಲ್ಲೂ ಮಂಕೀಫಾಕ್ಸ್ ಔದ್ಯೋಗಿಕವಾಗಿ ದೃಢವಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡು : ದುಬಾಯಿಯಿಂದ ಊರಿಗೆ ಬಂದು ಆರೋಗ್ಯ ಇಲಾಖೆಯ ಪ್ರತ್ಯೇಕ ನಿಗದಲ್ಲಿದ್ದ ವ್ಯಕ್ತಿಗೆ ಮಂಕಿಫಾಕ್ಸ್ ದೃಢೀಕರಿಸಕಲಾಗಿದೆ. ಇದರೊಂದಿಗೆ ಕಾಸರಗೋಡಿನಲ್ಲೂ ಮಂಕೀಫಾಕ್ಸ್ ಔದ್ಯೋಗಿಕವಾಗಿ ದೃಢವಾಯಿತು.

akshaya college

34ರ ಹರೆಯದ ಕಾಸರಗೋಡು ನಗರ ಪರಿಸರ ನಿವಾಸಿಗೆ ಮಂಕಿಫಾಕ್ಸ್ ದೃಢೀಕರಿಸಿದ ಬಳಿಕ ಅವರನ್ನು ಜನರಲ್ ಆಸ್ಪತ್ರೆಯ ಪ್ರತ್ಯೇಕ ಐಸೊಲೇಷನ್ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಕಿಫಾಕ್ಸ್ ಶಂಕೆಯೊಂದಿಗೆ ಇವರು ದುಬಾಯಿಯಿಂದ ಊರಿಗೆ ಮರಳಿದ್ದರು. ಬಳಿಕ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದಿದ್ದರು. ಅನಂತರ ಸರಕಾರಿ ಜನರಲ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿರೀಕ್ಷಣೆಯಲ್ಲಿರಿಸಿ ತಪಾಸಿಸಿದಾಗ ಮಂಕೀಫಾಕ್ಸ್ (Mpox)ದೃಢೀಕರಿಸಲಾಯಿತು. ಆದರೆ ಇವರಿಗೆ ತಗುಲಿರುವುದು ಯಾವ ವರ್ಗದ ವೈರಸ್ ಎಂಬುದು ತಿಳಿದುಬಂದಿಲ್ಲ. ಈ ಕುರಿತಾದ ವರದಿ ಪುಣೆ ವೈರಾಲಜಿ ಇನ್ಸಿಟ್ಯೂಟಿನಿಂದ ದೊರೆಯಬೇಕಾಗಿದೆ.

ಮಂಕಿಫಾಕ್ಸ್ ಎಂಬುದು ಮಾರಕ ವೈರಲ್ ಸೋಂಕು ರೋಗವಾದುದರಿಂದ ರೋಗಿಯನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ. ಈ ರೋಗವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನದಲ್ಲಿ ಪಯಣಿಸುವವರ ನಡುವೆ ಹರಡುವ ಮೂಲಕ ಪಸರಿಸುವುದಾಗಿ ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್!! ಮೊಬೈಲ್ ಬೆಳಕಲ್ಲೇ ಹೆರಿಗೆ ಮಾಡಿಸಿದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ.!!

ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ರಾತ್ರಿ ಏಕಾಏಕಿ ವಿದ್ಯುತ್‌ ಕೈ ಕೊಟ್ಟ ಪರಿಣಾಮ ವೈದ್ಯರು ಮೊಬೈಲ್…