ಆರೋಗ್ಯ

ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್!! ಮೊಬೈಲ್ ಬೆಳಕಲ್ಲೇ ಹೆರಿಗೆ ಮಾಡಿಸಿದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ.!!

ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ರಾತ್ರಿ ಏಕಾಏಕಿ ವಿದ್ಯುತ್‌ ಕೈ ಕೊಟ್ಟ ಪರಿಣಾಮ ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಕಾರ್ಯನಿರ್ವಹಿಸಿದ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ: ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ರಾತ್ರಿ ಏಕಾಏಕಿ ವಿದ್ಯುತ್‌ ಕೈ ಕೊಟ್ಟ ಪರಿಣಾಮ ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಕಾರ್ಯನಿರ್ವಹಿಸಿದ ಘಟನೆ ನಡೆದಿದೆ.

akshaya college

ಗುಲ್ಬರ್ಗ ಇನ್ಸಿಟ್ಯೂಟ್‌ಆಫ್ ಮೆಡಿಕಲ್ ಸೈನ್ಸ್‌ (ಜಿಮ್ಸ್) ಆಸ್ಪತ್ರೆಯ ತಾಯಿ ಮಕ್ಕಳ ವಿಭಾಗದಲ್ಲಿ ವಿದ್ಯುತ್ ಕೈ ಕೊಟ್ಟಿದ್ದರಿಂದ ವಿಭಾಗದ ವೈದ್ಯರು ಹಾಗೂ ಸಿಬ್ಬಂದಿ ಕತ್ತಲಲ್ಲೇ ರಾತ್ರಿ ಪಾಳಿಯ ಚಟುವಟಿಕೆ ನಿರ್ವಹಿಸಬೇಕಾಯಿತು. ಈ ಮಧ್ಯೆ ಸಾವಿರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜಿಮ್ಸ್ ಆಸ್ಪತ್ರೆಯಲ್ಲಿ ಬ್ಯಾಟರಿ ಆಧಾರಿತ ತಾತ್ಕಾಲಿಕ ವಿದ್ಯುತ್ ಪೂರೈಕೆ ವ್ಯವಸ್ಥೆ (ಇನ್ವರ್ಟರ್) ಬಳಸಿಕೊಳ್ಳುವವರೆಗೆ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ ಕಾರ್ಯನಿರ್ವಹಿಸಿದರು.

ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವೈದ್ಯರು ತಮ್ಮ ಸಹಾಯಕರ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಫ್ಯಾನ್‌ಗಳು ಕಾರ್ಯನಿರ್ವಹಿಸದ ಕಾರಣ ಸೊಳ್ಳೆಗಳ ಕಾಟದಿಂದಾಗಿ ನವಜಾತ ಶಿಶುಗಳು ಹಾಗೂ ಬಾಣಂತಿಯರು ಹೆಚ್ಚು ತೊಂದರೆ ಅನುಭವಿಸಿದರು. ಮತ್ತೊಂದೆಡೆ, ಗರ್ಭಿಣಿ ಮತ್ತು ಬಾಣಂತಿಯರ ಸಂಬಂಧಿಕರು ತಮ್ಮ ಮೊಬೈಲ್ ಟಾರ್ಚ್ ಬೆಳಕನ್ನು ಒದಗಿಸಿದ್ದರಿಂದ ಕರ್ತವ್ಯನಿರತ ವೈದ್ಯರು ಹಾಗೂ ನರ್ಸ್‌ಗಳು ಅರೆಬೆಳಕಿನಲ್ಲಿ ಪರದಾಡುತ್ತಲೇ ಕೆಲಸ ನಿರ್ವಹಿಸಿದರು.

ಈ ಬಗ್ಗೆ ಹೇಳಿಕೆ ನೀಡಿರುವ ಜಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಡಾ.ಶಿವಕುಮಾ‌ರ್, ಜಿಮ್ಸ್ ಆಸ್ಪತ್ರೆಯ ಜನರಲ್ ವಿಭಾಗದಲ್ಲಿ ಕಳೆದ ರಾತ್ರಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಿದ್ದು ನಿಜ, ಸಮಸ್ಯೆ ಸರಿಪಡಿಸಲಾಗಿದೆ. ಯಾವುದೇ ತೊಂದರೆ ಆಗದೆ ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದು ಮಾಹಿತಿ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts