Gl jewellers
ಆರೋಗ್ಯ

ಹೆಚ್ಚುತ್ತಿದೆ ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಗಳು!! |ತಡೆಗಟ್ಟುವ ಕ್ರಮಗಳೇನು? ಜೀವನ ಕ್ರಮ ಹೇಗಿರಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ

Karpady sri subhramanya
ಮಧ್ಯವಯಸ್ಕರಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತಗಳಿಂದಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ಆತಂಕವನ್ನುಂಟುಮಾಡಿದೆ. ಈ ಕಾಯಿಲೆಯಿಂದಾಗಿ ಜನಸಾಮಾನ್ಯರ ದೈನಂದಿನ ಜೀವನಶೈಲಿಯೇ ಬದಲಾಗುತ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

40 ವರ್ಷದ ಆಸುಪಾಸಿನವರಲ್ಲಿ ಹೆಚ್ಚೆಚ್ಚು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸುತ್ತಿದ್ದು, ಅದರಲ್ಲಿ ಹೃದಯಾಘಾತ ಅಥವಾ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಬಾಧಿಸುತ್ತಿವೆ.

ಮಧ್ಯವಯಸ್ಕರಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತಗಳಿಂದಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ಆತಂಕವನ್ನುಂಟುಮಾಡಿದೆ. ಈ ಕಾಯಿಲೆಯಿಂದಾಗಿ ಜನಸಾಮಾನ್ಯರ ದೈನಂದಿನ ಜೀವನಶೈಲಿಯೇ ಬದಲಾಗುತ್ತಿದೆ.

Sampya jathre

ಹೀಗಾಗಿ 40ರ ಆಸುಪಾಸಿನ ವಯಸ್ಸಿನ ಉದ್ಯೋಗಸ್ಥರು ತಮ್ಮ ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕಾದುದು ಅವಶ್ಯ. ಈ ಮೂಲಕ ಇಂಥ ಕಾಯಿಲೆಗಳಿಂದ ದೂರವಿರಲು ತಮ್ಮ ದೈನದಿಂದ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಲೇಬೇಕಾದ ಅನಿವಾರ್ಯತೆಯಿದೆ.

40 ವರ್ಷ ಕಳೆದ ಬಳಿಕ ಹೃದಯಾಘಾತ ಅಥವಾ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬಹು ಬೇಗ ಕಾಣಿಸಿಕೊಳ್ಳುತ್ತವೆ. ಆಗ ಹಲವು ರೀತಿಯ ಬದಲಾವಣೆಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಕೆಲವು ಕಾಯಿಲೆಗಳೂ ಕಾಡಲಾರಂಭಿಸುತ್ತವೆ. ಈ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿರುವಾಗ ಗಮನಕ್ಕೆ ಬಂದರೆ, ಆಗ ಅದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

ಹೃದಯಾಘಾತ ಎಂದರೆ, ನಮ್ಮ ದೇಹದಲ್ಲಿರುವ ಹೃದಯ ಹಠಾತಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದಕ್ಕೆ ವಿರುದ್ದವಾಗಿ, ಪರಿಧಮನಿಯ ಕಾಯಿಲೆಯಿಂದ ಹೃದಯಾಘಾತ ಸಂಭವಿಸುವುದು, ಇದರಿಂದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಹೆಚ್ಚಾಗುವುದು.

ಅಪಧಮನಿ ಗಟ್ಟಿಯಾಗುವ ಕಾರಣ, ರಕ್ತದೊತ್ತಡ ಹೆಚ್ಚಳವಾಗಿ, ಅದು ಹೃದಯದ ಕಾಯಿಲೆಗೆ ಕಾರಣವಾಗುತ್ತದೆ.

ಕಾರಣ ಏನು?:

ಜೀವನಶೈಲಿ:

ಕಚೇರಿಗಳಲ್ಲಿ ಕುಳಿತೇ ಕೆಲಸ ಮಾಡುವ ಕಾರಣ, ಅಧಿಕ ವ್ಯಾಯಾಮ ಸಿಗುವುದಿಲ್ಲ. ಕಳಪೆ ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ, ಇತರ ಕೆಟ್ಟ ಹವ್ಯಾಸಗಳು ಕೂಡ ಹೃದಯದ ಕಾಯಿಲೆ ಕಾಣಿಸಿಕೊಳ್ಳಲು ಕಾರಣವಾಗುವುದು.

ಆನುವಂಶಿಕತೆ:

ಕುಟುಂಬದ ಆನುವಂಶಿಕವಾಗಿ ಕಾಣಿಸಿಕೊಳ್ಳುವ ಕಾಯಿಲೆ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ದೀರ್ಘಕಾಲದ ಕಾಯಿಲೆಗಳು:

ಅನಿಯಂತ್ರಿತ ಅಧಿಕ ರಕ್ತದೊತ್ತಡ, ಮಧುಮೇಹ, ಸ್ಕೂಲಕಾಯತೆ ಹಾಗೂ ಕೆಟ್ಟ ಕೊಲೆಸ್ಟರಾಲ್ ಕೂಡ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

ತಡೆಗಟ್ಟುವುದು ಹೇಗೆ?

ನಿರಂತರ ವ್ಯಾಯಾಮ:

ಪ್ರತಿ ವಾರ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ವ್ಯಾಯಾಮ ಮಾಡಬೇಕು. ಈ ಮೂಲಕ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ತಡೆಗಟ್ಟುವುದಲ್ಲದೇ, ಕಡಿಮೆ ಮಾಡಬಹುದು. ಚುರುಕಾದ ನಡಿಗೆ, ಸೈಕಲ್ ಓಡಿಸುವುದು ಹಾಗೂ ಈಜು ಮುಂತಾದವು ಆರೋಗ್ಯ ಕಾಪಾಡಲು ಅನುವು ಮಾಡಿಕೊಡುತ್ತದೆ.

ಸಮತೋಲಿತ ಆಹಾರ:

ಹಣ್ಣು ಹಂಪಲು, ತರಕಾರಿ, ಧಾನ್ಯಗಳು, ಪ್ರೋಟಿನ್ ಉಳ್ಳ ಆಹಾರ ಮುಂತಾದವು ಸಮತೋಲಿತ ಆಹಾರಗಳು. ಇದು ಹೃದಯ ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಚೀಸ್, ಬಟರ್, ಪ್ಯಾಕ್ ಮಾಡಿದ ಆಹಾರಗಳು,, ಹೆಚ್ಚು ಸೋಡಿಯಂ ಉಳ್ಳ ಆಹಾರಗಳು ಮತ್ತು ಸಕ್ಕರೆ ಅಂಶ ಉಳ್ಳ ಪಾನೀಯಗಳ ಸೇವನೆ ಕಡಿಮೆ ಮಾಡಬೇಕು. ಮೆಡಿಟರೇನಿಯನ್ ಆಹಾರ, ಆಲೀವ್ ಎಣ್ಣೆ, ಬೀಜಗಳು ಮತ್ತು ಮೀನು ಮುಂತಾದವುಗಳ ಸೇವನೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ತಡೆಗಟ್ಟಬಹುದು. ಓಮೆಗಾ 3 ಹಾಗೂ ವಿಟಾಮಿನ್ ಇ ಮುಂತಾದವುಗಳು ಹೃದಯಕ್ಕೆ ಕುರಿತ ಕಾಯಿಲೆಯನ್ನು ತಡೆಗಟ್ಟುವುದು.

ನಿಯಮಿತ ಆರೋಗ್ಯ ತಪಾಸಣೆ:

ರಕ್ತದೊತ್ತಡ ಕುರಿತು ತಿಳಿದುಕೊಳ್ಳಲು, ಕೊಲೆಸ್ಟರಾಲ್ ಮಟ್ಟ, ಥೈರಾಯ್ಡ್ ಮುಂತಾದವುಗಳ ನಿಯಂತ್ರಣಕ್ಕೆ ವರ್ಷಕ್ಕೊಮ್ಮೆ ತಪಾಸಣೆ ಅಗತ್ಯ. ಈ ಮೂಲಕ ಮುಂದಾಗುವ ಸಂಭಾವ್ಯ ಕಾಯಿಲೆಗಳನ್ನು ಆರಂಭದಲ್ಲೇ ತಡೆಗಟ್ಟಬಹುದು. ಕಾರಣ, ಆರಂಭದಲ್ಲೇ ಎಚ್ಚರಿಕೆ ವಹಿಸದಿದ್ದರೆ, ಹೃದಯದ ಕಾಯಿಲೆಗೆ ಕಾರಣವಾಗಬಹುದು. ಕಾಯಿಲೆಗೆ ತಡೆ ಮತ್ತು ಆರಂಭದಲ್ಲೇ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮವು ಕಾಯಿಲೆಯ ಹೆಚ್ಚಳಕ್ಕೆ ಕಡಿವಾಣ ಹಾಕುವುದು ಹಾಗೂ ಅನಾರೋಗ್ಯಕ್ಕೆ ಒಳಗಾಗುವುದನ್ನು ಕೂಡ ತಡೆಗಟ್ಟುವುದು.

ಒತ್ತಡ ನಿರ್ವಹಣೆ:

ಧ್ಯಾನ, ಯೋಗ ಹಾಗೂ ಉಸಿರಾಟದ ವ್ಯಾಯಾಮ ಮುಂತಾದವು ಒತ್ತಡ ಕಡಿಮೆ ಮಾಡುವ ಪ್ರಮುಖ ವಿಧಾನಗಳು. ಸಾಮಾಜಿಕ ಸಂವಹನ ಹಾಗೂ ಹವ್ಯಾಸ ರೂಢಿಸಿಕೊಳ್ಳುವುದು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಆಂತರಿಕವಾಗಿ ಆತಂಕ ಕಡಿಮೆ ಮಾಡುವುದು.

ದೀರ್ಘ ನಿದ್ದೆ:

ಪುರುಷರಿಗೆ ದಿನನಿತ್ಯ ಆರರಿಂದ 8 ಗಂಟೆಗಳ ನಿದ್ದೆ ಉತ್ತಮ ಹಾಗೂ ಸ್ತ್ರೀಯರಿಗೆ 7-9 ಗಂಟೆಗಳ ನಿದ್ದೆ ಅಗತ್ಯ. ನಿದ್ದೆಯಲ್ಲಿನ ಏರುಪೇರು, ಗೊರಕೆ, ನಿದ್ದೆ ಮಾಡುವ ವೇಳೆ ಆಮ್ಲಜನಕದ ಕೊರತೆಯು ಸುಖನಿದ್ದೆ ಅಡ್ಡಿಯಾಗಬಹುದು. ಇಂಥವುಗಳನ್ನು ನಿಯಂತ್ರಿಸಬೇಕು

ಧೂಮಪಾನ, ಮದ್ಯಪಾನ:

ಧೂಮಪಾನ, ಮದ್ಯಪಾನ ಮಾಡುವುದು ಕೂಡ ಹೃದಯದ ಕಾಯಿಲೆಗೆ ದಾರಿ. ಇದರಿಂದ ಕಾಯಿಲೆ ಮಟ್ಟ ಹೆಚ್ಚಾಗುವುದು. ಹೀಗಾಗಿ, ಇಂಥ ಹವ್ಯಾಸ ಬಿಟ್ಟು, ಧ್ಯಾನ ಮಾಡಿ. ಧ್ಯಾನ, ವ್ಯಾಯಾಮ ರೂಢಿಸಿಕೊಳ್ಳುವುದು ಉತ್ತಮ.

ವೈದ್ಯಕೀಯ ಮಧ್ಯಸ್ಥಿಕೆ

ಚಿಕಿತ್ಸೆ:

ಅಧಿಕ ಕೊಲೆಸ್ಟರಾಲ್ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಈಗಾಗಲೇ ಬಳಲುತ್ತಿರುವವರು ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಹೊಸ ಕಾಯಿಲೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ, ಈ ಕುರಿತಾದ ಅರಿವು ಅಗತ್ಯ.

ನಿಯಮಿತ ಸಮಾಲೋಚನೆ:

ನೀವು ಕಾಯಿಲೆ ಹಾಗೂ ಪಡೆಯುತ್ತಿರುವ ಚಿಕಿತ್ಸೆ ಹಾಗೂ ಔಷಧ ಕುರಿತು ವೈದ್ಯರಲ್ಲಿ ಹೆಚ್ಚು ಹೆಚ್ಚು ಸಲಹೆ ಪಡೆಯಲು ಆಗಾಗ ಅವರ ಸಲಹೆ ಪಡೆಯುತ್ತೀರಿ. ಇದು ಹೃದಯ ಕಾಯಿಲೆ ನಿಯಂತ್ರದಲ್ಲಿಡಲು ಸಹಾಯ ಮಾಡುತ್ತದೆ. ಹೊಸ ಕಾಯಿಲೆಗಳ ಬಗ್ಗೆ ಮುಕ್ತವಾಗಿ ಸಮಾಲೋಚಿಸುವುದು ಅತಿ ಮುಖ್ಯ.

ಆನುವಂಶಿಕದ ಪಾತ್ರ:

ಹೃದಯ ಕಾಯಿಲೆಗೆ ಆನುವಂಶಿಕತೆ ಪ್ರಮುಖ ಪಾತ್ರ ವಹಿಸುವುದು. ದೈನಂದಿನ ಜೀವನದಲ್ಲಾಗುವ ಬದಲಾವಣೆಯು ಇದಕ್ಕೆ ಕಾರಣ. ಕಾಯಿಲೆಯಿಂದ ಬಳಲುವವರು ಹೆಚ್ಚು ಜಾಗರೂಕರಾಗಿ, ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯ ತಜ್ಞರೊಂದಿಗೆ ಈ ಕುರಿತು ಸಮಾಲೋಚಿಸಬೇಕು.

40ರ ಬಳಿಕ ಸಂಭವಿಸಬಹುದಾದ ಹೃದಯಾಘಾತ ಹಾಗೂ ಈ ಕುರಿತಾದ ಕಾಯಿಲೆಗಳಿಗೆ ಹಲವು ಪ್ರಕಾರಗಳಲ್ಲಿ ಜಾಗರೂಕತೆ ವಹಿಸಬೇಕಾಗುತ್ತದೆ. ಇಲ್ಲಿ ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆ, ಆಗಾಗ ವೈದ್ಯಕೀಯ ತಪಾಸಣೆ, ಅಗತ್ಯ ಬಿದ್ದಾಗ ವೈದ್ಯರಿಂದ ಸಲಹೆ ಪಡೆಯುವುದು ಮುಂತಾದವು ಇರಲಿ. ಹೃದಯಯನ್ನು ಆರೋಗ್ಯವಾಗಿಡಲು ಅಗತ್ಯವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಹಾಗೂ ಈ ಕುರಿತು ತಜ್ಞರೊಂದಿಗೆ ಚರ್ಚಿಸಿ. ಇದರಿಂದ ಹೃದಯದ ಕಾಯಿಲೆಯಿಂದ ದೂರವಿಡಬಹುದು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್!! ಮೊಬೈಲ್ ಬೆಳಕಲ್ಲೇ ಹೆರಿಗೆ ಮಾಡಿಸಿದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ.!!

ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ರಾತ್ರಿ ಏಕಾಏಕಿ ವಿದ್ಯುತ್‌ ಕೈ ಕೊಟ್ಟ ಪರಿಣಾಮ ವೈದ್ಯರು ಮೊಬೈಲ್…