ಅಜ್ಮೀರ್ ಯಾತ್ರೆಗೆ ಕರೆದೊಯ್ಯುವ ಉಪ್ಪಿನಂಗಡಿ ಮೂಲದ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಏಜೆನ್ಸಿ tour agency ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮಾತ್ರವಲ್ಲ, ಇದನ್ನು ಪ್ರಶ್ನಿಸಿದ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಆರೋಪಿಸಲಾಗಿದೆ.
ಉಪ್ಪಿನಂಗಡಿಯ ಆತೂರು ಮೂಲದ ಮಹಮ್ಮದ್ ತ್ವಾಹ ಹಾಗೂ ಕುಟುಂಬಸ್ಥರಿಗೆ ಉಪ್ಪಿನಂಗಡಿ ಮೂಲದ ಉಪ್ಪಿನಂಗಡಿ ಮೂಲದ ಫಾರೂಕ್ ಎಂಬವರಿಗೆ ಸೇರಿದ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಏಜೆನ್ಸಿ tour agency ವಂಚಿಸಿದ ಬಗ್ಗೆ ಆರೋಪ ಕೇಳಿಬಂದಿದ್ದು, ಬೆಂಗಳೂರಿನ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಒಟ್ಟು 60 ಯಾತ್ರಿಕರಿದ್ದ ತಂಡ ಅಜ್ಮೀರ್ ಯಾತ್ರೆಗೆ ತೆರಳಿತ್ತು. ಟೂರ್ ಏಜೆನ್ಸಿ tour agency ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದು, 60 ಸಾವಿರ ರೂ. ಪ್ಯಾಕೇಜ್ ಗೊತ್ತು ಪಡಿಸಲಾಗಿತ್ತು. ಆದರೆ ಯಾತ್ರೆಯ ನಡುವಿನಲ್ಲಿ ಮಹಮ್ಮದ್ ತ್ವಾಹ ಕುಟುಂಬಸ್ಥರಲ್ಲಿ ಟೂರ್ ಏಜೆನ್ಸಿ ಹೆಚ್ಚುವರಿ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿದಾಗ, ಟೂರ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಏಜೆನ್ಸಿಯವರು tour agency ಪ್ರತೀ ಪ್ಯಾಕೇಜ್ ಟೂರುಗಳಲ್ಲೂ ಯಾತ್ರಿಕರಿಗೆ ಇದೇ ರೀತಿ ಹಣ ವಂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಮ್ಮದ್ ತ್ವಾಹ ಅವರ ಮೇಲೆ ಏಜೆನ್ಸಿ ಸಿಬ್ಬಂದಿ ಬಸ್ಸಿನಲ್ಲಿಯೇ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.