ಬೆಳ್ತಂಗಡಿ: ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್ ನಲ್ಲಿ 720 ಅಂಕಗಳ ಪೈಕಿ 710 ಅಂಕ ಪಡೆದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಎಚ್.ಎಂ.ಗೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ನ ಜೊತೆಗೆ ಗೌರವಾರ್ಪಣೆ ನೀಡಿದರು.
ಎಕ್ಸೆಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಎಚ್.ಎಂ, ಹೆತ್ತವರಾದ ಮರಿಸ್ವಾಮಿ ಎಚ್.ಎಂ., ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್, ಪ್ರಾಂಶುಪಾಲ ಡಾ.ನವೀನ್ ಕುಮಾರ್ ಎಂ, ಆಡಳಿತ ಮಂಡಳಿಯ ಸಹನಾ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ, ಶಾಂತಿರಾಜ್ ಜೈನ್, ಪ್ರಾಧ್ಯಾಪಕರಾದ ಶ್ರೀನಿಧಿ ರಾಜ್, ನಿಶಾ ಪೂಜಾರಿ, ವಿಲ್ಸನ್ ತಳ್ತೊಟ್ಟಿ, ಕೇಶವ್ ರಾವ್, ಡಾ.ಸತ್ಯನಾರಾಯಣ್ ಭಟ್, ಈಶ್ವರ್ ಶರ್ಮಾ, ಜೈಸ ಆ್ಯಂಟನಿ, ಚಿಗುರು ಪ್ರಕಾಶ್, ಗ್ರಿಷಿನ್ ಡಿಸೋಜ, ಡಾ. ಆಸ್ಟಿನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ರಿಚರ್ಡ್ ಜೀವನ್ ಮೊರಾಸ್ ಮತ್ತಿತರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.