ಪುತ್ತೂರು: ಜೆ.ಇ ಯವರು ಟಿ.ಸಿ ಯ ಫ್ಯೂಸ್ ಹಾಕಿ ಸರಿಮಾಡುತ್ತಿರುವ ಘಟನೆ ಸವಣೂರು ಎಂಬಲ್ಲಿ ನಡೆದಿದೆ.
ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಫೋನ್ ಕರೆಗಳ ಕಿರಿಕಿರಿಯ ಕಾರಣ ಜೆ.ಇ ಗಳೇ ಬಂದು ಟಿ.ಸಿ ಯ ಫ್ಯೂಸ್ ಹಾಕಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಸರಿಪಡಿಸುತ್ತಿದ್ದಾರೆ.
ಮಳೆ ಮತ್ತು ಗಾಳಿಗೆ ವಿದ್ಯುತ್ ಕಂಬಗಳು ಉರುಳಿ ಜನಸಾಮಾನ್ಯರಿಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದ್ದು ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ಸ್ವತಃ ಜೆ.ಇ ಯಾದ ರಾಜೇಶ್ ರವರು ವಿದ್ಯುತ್ ಸಂಪರ್ಕದ ಲೈನ್ ಕೆಲಸಗಳಿಗೆ ತಾವೇ ದುಮುಕಿದ್ದನ್ನು ಕಂಡು ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.