Gl jewellers
ಶಿಕ್ಷಣ

ಅಕ್ಷಯ ಕಾಲೇಜಿನಲ್ಲಿ ‘ಪ್ರಿನ್ಸ್ ಆಂಡ್ ಪ್ರಿನ್ಸೆಸ್’ ಫ್ಯಾಷನ್ ಶೋ| 6 ವಿಭಾಗದಲ್ಲಿ ನಡೆದ ಸ್ಪರ್ಧೆಯ ಬಹುಮಾನ ವಿತರಣೆ

ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತಕಲಾ ಸಂಘದ ವತಿಯಿಂದ ನಡೆದ ಪ್ರಿನ್ಸ್ ಆಂಡ್ ಪ್ರಿನ್ಸೆಸ್ ಫ್ಯಾಶನ್ ಶೋ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಫೆ. 8ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಸಂಪ್ಯ ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತಕಲಾ ಸಂಘದ ವತಿಯಿಂದ ನಡೆದ ಪ್ರಿನ್ಸ್ ಆಂಡ್ ಪ್ರಿನ್ಸೆಸ್ ಫ್ಯಾಶನ್ ಶೋ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಫೆ. 8ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

Papemajalu garady
Karnapady garady

ಡಿ. 1ರಂದು ಮೊದಲ ಹಂತದ ಸ್ಪರ್ಧೆ ನಡೆದಿದ್ದು, 260 ಸ್ಪರ್ಧಾಳುಗಳು ಭಾಗವಹಿಸಿದ್ದರು. ಫಿನಾಲೆಗೆ 80 ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದರು.

ಇದನ್ನು ಓದಿ: ಪುತ್ತೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಸಂದರ್ಶನ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್, ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

3 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 6 ರಿಂದ 10 ವರ್ಷದ ವಿಭಾಗ, 11 ರಿಂದ 14 ವರ್ಷದ ವಿಭಾಗ ಮತ್ತು 15 ರಿಂದ 18 ವರ್ಷದ ವಿಭಾಗದ ಸ್ಪರ್ಧೆ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ನ ವೇದ ಲಕ್ಷ್ಮೀಕಾಂತ್ ಮಾತನಾಡುತ್ತಾ, ಫ್ಯಾಶನ್ ಕ್ಷೇತ್ರದ ಪ್ರತಿಭೆಯ ಅನಾವರಣಕ್ಕಾಗಿ ಪುತ್ತೂರಿನಲ್ಲಿ ಇಂತಹ ಒಂದು ವೇದಿಕೆಯ ಅಗತ್ಯವಿತ್ತು. ಈ ಅಗತ್ಯವನ್ನು ಅಕ್ಷಯ ಕಾಲೇಜು ಇಂದು ಪೂರೈಸಿದೆ ಎಂದರು

ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಸಂಪ್ಯ ಆದರ್ಶ ಎಲೆಕ್ಟ್ರೋನಿಕ್ಸ್ ಆ್ಯಂಡ್ ಫರ್ನಿಚರ್ಸ್’ನ ಅಬ್ದುಲ್ ರೆಹಮಾನ್ ಶುಭ ಹಾರೈಸಿದರು.

ಬಹುಮಾನ ವಿತರಿಸಿ ಮಾತನಾಡಿದ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ಚಟುವಟಿಕೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರವಾಗಿರುತ್ತದೆ. ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜಿನ ಈ ಪರಿಶ್ರಮ ಶ್ಲಾಘನೀಯ ಎಂದರು.

ಫ್ಯಾಶನ್ ಶೋ ವಿಜೇತರ ವಿವರ ಹೀಗಿದೆ

ವಿಜೇತರ ಪಟ್ಟಿ-1st category

Boys- Prince:-

Winner – Rushab Rao

1st runner up – Saanvith.S.Hegde

2 nd Runner up – Advik. A

Girls-Princess:-

Winner – Charvi Ashwin

1st runner up – Kahani Yogish

2 nd Runner up – Amrutha. J. Amin

2nd category

Boys-Prince:-

Winner – Sujan kadaba

1 st runner up- Thanaya jaake gowda

2 nd runner up – Gowtham krishna

Girls-Princess:-

Winner – Rakshitha Nayar

1 st runner up – Chukki Vittal

2 nd runner up – Divika kiran

3rd category

Boys-Prince

Winner – Sterie tom

1 st runner up – Sarthak.J.K

2 nd runner up – Lohith.

Girls-Princess

Winner –  Sthuthi Shetty

1 st runner up – Nisha.C.j

2 nd runner up – Benita Shaina Dsouza.

ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ವಂಡರ್ ಲಾ ವತಿಯಿಂದ ವಿಶೇಷ ಕೂಪನ್ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ವಂಡರ್ ಲಾ ಆಮ್ಯೂಸ್ಮೆಂಟ್ ಪಾರ್ಕ್ ಇದರ ಡೆವಲಪ್ಮೆಂಟ್ ಮ್ಯಾನೇಜರ್ ಸಂತೋಷ್, ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಕಾಲೇಜಿನ ಆಡಳಿತ ನಿರ್ದೇಶಕ ಅರ್ಪಿತ್ ಟಿ.ಎ, ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್, ಕಾರ್ಯಕ್ರಮದ ಸಂಯೋಜಕ ಕಿಶನ್ ಎನ್. ರಾವ್, ಫ್ಯಾಷನ್ ಡಿಸೈನ ವಿಭಾಗದ ಮುಖ್ಯಸ್ಥೆ ಅನುಷಾ ಪ್ರವೀಣ್, ಅಧ್ಯಾಪಕ ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಬಿಸಿಲ ತಾಪಕ್ಕೆ ನೆರಳಾದ ಗುಜುರಿ ಹಣ!! ಹೀಗೂ ಬಸ್ ನಿಲ್ದಾಣ ನಿರ್ಮಿಸಬಹುದೆಂದು ತೋರಿಸಿಕೊಟ್ಟ ಎನ್.ಎಸ್.ಎಸ್. ಕಾರ್ಯಕರ್ತರು!

ಗುಜಿರಿ ಸಂಗ್ರಹಿಸಿ ಮಾರಿ ಸಿಕ್ಕಿದ ಹಣದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ವಿದ್ಯಾರ್ಥಿಗಳು