ಸಾಕು ಪ್ರಾಣಿಗಳನ್ನು ನಾವು ಎಷ್ಟು ಪ್ರೀತಿಸುತ್ತೇವೆಯೋ ಅದಕ್ಕಿಂತ 10 ಪಟ್ಟು ಅವುಗಳು ನಮ್ಮ ಮೇಲೆ ನಿಷ್ಠೆ ಪ್ರೀತಿಯನ್ನು ತೋರಿಸುತ್ತವೆ. ಮಾಲೀಕ ಹಾಗೂ ಸಾಕು ಪ್ರಾಣಿಗಳ ಬಾಂಧವ್ಯಕ್ಕೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಅಗಿದೆ.
ಕಂಠಪೂರ್ತಿ ಕುಡಿದು ಇತರರೊಂದಿಗೆ ಜಗಳವಾಡಿ ರಂಪಾಟ ಮಾಡುವವರು ಒಂದೆಡೆಯಾದರೆ, ಕುಡಿದು ತೂರಾಡಿ ರೋಡ್ ಮಧ್ಯೆ ಚರಂಡಿಯಲ್ಲಿ ಬೀಳುವವರು ಇನ್ನೊಂದು ಕಡೆ. ಕುಡುಕರ ಅವಾಂತರಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ಇವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಕಂಠಪೂರ್ತಿ ಕುಡಿದು ನಡೆದಾಡಲು ಕೂಡಾ ಸಾಧ್ಯವಾಗದ ಮಾಲೀಕನನ್ನು ಗೂಳಿಯೊಂದು ಜೋಪಾನವಾಗಿ ಮನೆಗೆ ಕರೆದುಕೊಂಡು ಹೋಗಿದೆ. ಹೌದು ಕುಡಿದು ಎಲ್ಲೂ ಬೀಳಬಾರದೆಂದು ಗೂಳಿ ಮಾಲೀಕನನು ಕರೆದುಕೊಂಡು ಹೋಗಿದೆ.
ಮಾಲೀಕ ಹಾಗೂ ಗೂಳಿಯ ಬಾಂಧವ್ಯದ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.