ಪುತ್ತೂರು: ಪುತ್ತೂರಿನ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಥಸಂಚಲನ ಮಾಡಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳು ತಂದ ಕ್ರೀಡಾ ಜ್ಯೋತಿಯಿಂದ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಟ್ಲ ವಿಠಲ ಪಿಯು ಕಾಲೇಜು ನೇವಿ ವಿಂಗ್ ಎನ್.ಸಿ.ಸಿ. ಆಫೀಸರ್ ಶ್ರೀನಿವಾಸ ಗೌಡ ದ್ವಜಾರೋಹಣ ಮಾಡಿ, ಕ್ರೀಡೆ ಮತ್ತು ಶಿಕ್ಷಣ ಎರಡು ಕೂಡ ಜೀವನಕ್ಕೆ ಅತ್ಯಗತ್ಯ. ಸಮಾಜದಲ್ಲಿ ಕೆಟ್ಟ ವಿಷಯಗಳತ್ತ ವಾಲದೆ ನಾವು ಪೋಷಕರಿಗೆ, ಶಿಕ್ಷಕರಿಗೆ ಹೆಸರು ತಂದು ಕೊಡುವ ಕೆಲಸ ಮಾಡಬೇಕು. ನೀವು ಮುಂದಿನ ಸಮಾಜದ ಉತ್ತಮ ಶಕ್ತಿಗಳಾಗಿ ಎಂದು ಶುಭಹಾರೈಸಿದರು.
ಪುತ್ತೂರು ಟೌನ್ ಪೊಲೀಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಭಾರತೀಯ ಕ್ರೀಡಾ ಸಾಧಕರ ನಿದರ್ಶನಗಳನ್ನು ಹೇಳುತ್ತಾ, ಅವರಂತೆ ಸಾಧಕರಾಗಿ ಭಾರತ ದೇಶಕ್ಕೆ ಕೊಡುಗೆಯನ್ನು ನೀಡಿ ಮತ್ತು ಕಠಿಣ ಶ್ರಮ ಇದ್ದರೆ ಮಾತ್ರ ನಾವು ಜೀವನದಲ್ಲಿ ಸಾಧಕರಂತೆ ಹೆಸರು ಮಾಡಲು ಸಾಧ್ಯ. ಹಾಗಾಗಿ ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆ ಬದುಕನ್ನು ಕಟ್ಟಿ ಕೊಡುತ್ತದೆ ಎಂದರು.
ರೋಟರಿ ಈಸ್ಟ್ ಪುತ್ತೂರು ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಅವರು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅಕ್ಷಯ ಶಿಕ್ಷಣ ಸಂಸ್ಥೆಯ ಪಾತ್ರ ಹಿರಿದಾಗಿದೆ. ಹಾಗಾಗಿ ನಿಮ್ಮ ಎಲ್ಲರ ಭವಿಷ್ಯವು ಉತ್ತಮವಾಗಿರುತ್ತದೆ ಎಂಬ ದೃಢ ನಂಬಿಕೆ ನನಗಿದೆ. ಎಲ್ಲರಿಗೂ ಶುಭಾಶಯಗಳು ಎಂದರು.
ಭಾರತ್ ಬ್ಯಾಂಕ್ ಪುತ್ತೂರು ಶಾಖೆಯ ಬ್ರಾಂಚ್ ಮ್ಯಾನೇಜರ್ ಸುಶಾಂತ್ ಕುಮಾರ್ ಅವರು ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ್ ಯೂತ್ ಆಫೇರ್ಸ್ ಮತ್ತು ಸ್ಪೋರ್ಟ್ಸ್ ಇದರ ಯೂಥ್ ಅಂಬಾಸಿಡರ್ ಶ್ರೀಕಾಂತ್ ಪೂಜಾರಿ ಬಿರಾವು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಇವರು ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯದ ಭದ್ರ ಬುನಾಧಿಗೆ ಅತಿಮುಖ್ಯ. ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂಧಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯಲ್ಲಿ ಯಶಸ್ವಿಗಳಿಸಿ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲು ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕನಸಿನ ಜೊತೆ ನನಸಾಗಿಸುವ ಮನಸು ಮುಖ್ಯ. ನಮ್ಮ ಸಂಸ್ಥೆಗಳ ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕಾಲೇಜಿಗೆ ಹೆಮ್ಮೆ ತಂದಿರುತ್ತಾರೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಕಠಿಣ ಪರಿಶ್ರಮ ಗೆಲುವಿನ ಮೂಲವೆಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತ ಅಧಿಕಾರಿ ಅರ್ಪಿತ್ ಟಿ. ಎ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ದೈಹಿಕ ಶಿಕ್ಷಣ ಶಿಕ್ಷಕ ನವೀನ್, ಐ.ಕ್ಯೂ.ಎ.ಸಿ. ನಿರ್ದೇಶಕಿ ರಶ್ಮಿ ಉಪಸ್ಥಿತರಿದ್ದರು.
ಕ್ರೀಡಾ ನಾಯಕ ಧನುಷ್ ತೃತೀಯ ಬಿಸಿಎ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಸಿಕೊಟ್ಟರು.
ದ್ವಿತೀಯ ಬಿಸಿಎಯ ನಿಶ್ಮಿತಾ, ದ್ವಿತೀಯ ಎಫ್.ಡಿಯ ದೇವಿಕಾ, ತೃತೀಯ ಐಡಿಯ ದೀಕ್ಷಾ ಅತಿಥಿಗಳ ಪರಿಚಯ ಮಾಡಿದರು. ತೃತೀಯ ಎಫ್. ಡಿಯ ಪ್ರಕೃತಿ ಪ್ರಾರ್ಥಿಸಿದರು. ಕ್ರೀಡಾ ಕಾರ್ಯದರ್ಶಿ, ದ್ವಿತೀಯ ಬಿ. ಕಾಂನ ಆಶಿಕಾ ಸ್ವಾಗತಿಸಿ, ಪ್ರಥಮ ಬಿಸಿಎಯ ಕೆ ದೀಕ್ಷಾ ವಂದಿಸಿದರು. ಪ್ರಥಮ ಬಿಸಿಎಯ ಸುನೀಕ್ಷಾ ನಿರೂಪಿದರು.
ಆಕರ್ಷಕ ಪಥಸಂಚಲನ:
ಅಕ್ಷಯ ಸಮೂಹ ಶಿಕ್ಷಣ ಸಮೂಹ ಸಂಸ್ಥೆಗಳಾದ ಅಕ್ಷಯ ಪದವಿ ಕಾಲೇಜು, ಅಕ್ಷಯ ಪದವಿ ಪೂರ್ವ ಕಾಲೇಜು ಹಾಗೂ ಅಕ್ಷಯ ಕೆರಿಯರ್ ಅಕಾಡೆಮಿಯ ವಿದ್ಯಾರ್ಥಿಗಳ 10 ತಂಡ ಪಥಸಂಚಲನದಲ್ಲಿ ಭಾಗವಹಿಸಿದವು.


























