Gl
ಶಿಕ್ಷಣ

ಪಾಣಾಜೆ ವಿದ್ಯಾವರ್ಧಕ ಸಂಘದ ಮಹಾಸಭೆ | ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ ದೇವಸ್ಯ ಪುನರಾಯ್ಕೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪಾಣಾಜೆ: ಪಾಣಾಜೆ ವಿದ್ಯಾವರ್ಧಕ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅವರ ಅಧ್ಯಕ್ಷತೆಯಲ್ಲಿ ಅ. 30 ರಂದು ಸುಬೋಧ ಪ್ರೌಢಶಾಲೆಯಲ್ಲಿ ಜರಗಿತು.

core technologies

ಸಂಘದ ಕಾರ್ಯದರ್ಶಿ ಗಿಳಿಯಾಲು ಮಹಾಬಲೇಶ್ವರ ಭಟ್ ಗತ ವರ್ಷದ ವರದಿಯನ್ನು ಮಂಡಿಸಿದರು. ಖಜಾಂಜಿ ಪಿ ಎಂ ಬಾಲಕೃಷ್ಣ ಭಟ್ ಲೆಕ್ಕಪತ್ರ ಮಂಡಿಸಿದರು

ಮುಂದಿನ ಮೂರು ವರ್ಷಕ್ಕೆ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ ಪುನರಾಯ್ಕೆ ಗೊಂಡರು.ಉಪಾಧ್ಯಕ್ಷರಾಗಿ ಕಡಂದೇಲು ಈಶ್ವರ ಭಟ್, ಕಾರ್ಯದರ್ಶಿಯಾಗಿ ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ಹಾಗೂ ಖಜಾಂಜಿಯಾಗಿ ಎ. ಎನ್. ಕೊಳಂಬೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸದಾಶಿವ ಎಸ್ ವಿ ಪಾಲ್ತಮೂಲೆ, ಪಿಲಿಂಗಲ್ಲು ಕೃಷ್ಣ ಭಟ್, ವಿನೋಭಾ ಶೆಟ್ಟಿ ದಂಬೆಕಾನ, ಜಿ. ಕೆ. ಅವಿನಾಶ್ ಗಿಳಿಯಾಲು, ಕೃಷ್ಣ ಮೋಹನ ಪಿ ಎಸ್ ಪುತ್ತೂರು, ಕೃಪಾ ಶಂಕರ ಅರ್ಧಮೂಲೆ,  ವಿದ್ಯಾನಾರಾಯಣ ಮಣ್ಣಂಗಳ,ಉಮೇಶ ಮಿತ್ತಡ್ಕ, ಡಾ ಹರಿಕೃಷ್ಣ ಪಾಣಾಜೆ, ಸಿ. ಸುಬ್ರಹ್ಮಣ್ಯ ಶಾಸ್ತ್ರಿ ಪುತ್ತೂರು, ಡಾ. ತಿಮ್ಮಪ್ಪ ರೈ ಕೆದಂಬಾಡಿ  ಸದಸ್ಯರಾಗಿ ಆಯ್ಕೆಯಾದರು.

ಶಾಲಾ ಮುಖ್ಯ ಶಿಕ್ಷಕಿ  ನಿರ್ಮಲ. ಕೆ ಅವರನ್ನು ಪದನಿಮಿತ್ತ ಸದಸ್ಯರನ್ನಾಗಿ ಹಾಗೂ  ವಿನುತಾ ಕುಮಾರಿ ಬಿ ಅವರನ್ನು ಶಿಕ್ಷಕರ ಪ್ರತಿನಿಧಿಯನ್ನಾಗಿ ನೇಮಿಸಲಾಯಿತು.

ಅಧ್ಯಕ್ಷರು ತನ್ನ ಭಾಷಣದಲ್ಲಿ ಸರ್ವ ಸದಸ್ಯರ ಸಹಕಾರವನ್ನು ಕೋರಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ  ನಿರ್ಮಲ. ಕೆ ಸ್ವಾಗತಿಸಿ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಶತಮಾನೋತ್ಸವ ಪಥದತ್ತ ಬನ್ನೂರು ಹಿ.ಪ್ರಾ. ಶಾಲೆ | ಜ. 4ಕ್ಕೆ ಶಾಲಾ ಶತಮಾನೋತ್ಸವಕ್ಕೆ ಚಾಲನೆ ಹಾಗೂ ಕಾಮಗಾರಿಗಳ ಶಿಲಾನ್ಯಾಸ

ಪುತ್ತೂರು: ಶತಮಾನದ ಹೊಸ್ತಿಲಲ್ಲಿರುವ ಬನ್ನೂರು ಹಿ.ಪ್ರಾ. ಶಾಲೆಯಲ್ಲಿ ಶಾಲಾ ಶತಮಾನೋತ್ಸವಕ್ಕೆ…