ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡಿಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಹಾಗೂ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಗಳ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್ ಅನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡಬಿದಿರೆಯ ಪಶುವೈದ್ಯ ಡಾ. ಚಂದ್ರಶೇಖರ್ ಅವರು ಮಾತನಾಡಿ ವಿದ್ಯಾರ್ಥಿ ಪರಿಷತ್ ಎಂಬುದು ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ ನಡುವೆ ಕೊಂಡಿಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಚುನಾವಣೆಯನ್ನು ನಡೆಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಸಾಕಾರಗೊಳಿಸಿದಾಗ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಾಗಿದೆ. ಉತ್ತಮ ವಿದ್ಯಾರ್ಥಿ ನಾಯಕರು ಸಂಸ್ಥೆಯ ಪ್ರಗತಿಗೆ ಪೂರಕವಾದ ಮಹತ್ತರವಾದ ಕೆಲಸಗಳನ್ನು ಜತೆಗಿರುವ ವಿದ್ಯಾರ್ಥಿಗಳಿಂದ ಮಾಡಿಸಬಹುದು. ಕಾಲೇಜಿನ ಶಿಸ್ತು ಮತ್ತು ಘನತೆಯನ್ನು ಹೆಚ್ಚಿಸುವ ಕೆಲಸಗಳು ವಿದ್ಯಾರ್ಥಿ ನಾಯಕರಿಂದ ಆಗಬೇಕಾಗಿದೆ ಎಂದರು.
ಅAಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಾದ ಸುಧನ್ವ ಸುದರ್ಶನ್ ಶಾಲಾ ನಾಯಕನಾಗಿ, ರಕ್ಷಾ ಎಸ್. ಎಸ್ ಶಾಲಾ ನಾಯಕಿಯಾಗಿ, ಗೃಹಮಂತ್ರಿಯಾಗಿ ೯ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್.ಜಿ, ಶಿಸ್ತು ಪಾಲನಾ ಮಂತ್ರಿಯಾಗಿ ವಂಶಿಕಾ ಬಿ. ರೈ, ಕ್ರೀಡಾ ಮಂತ್ರಿಯಾಗಿ ಭಾರ್ಗವ್ ಎಸ್. ರೈ, ಶಿಕ್ಷಣ ಮಂತ್ರಿಯಾಗಿ ೮ನೇ ತರಗತಿಯ ವಿದ್ಯಾರ್ಥಿ ಶ್ರೀನಿಕ್ ಎಸ್. ಆಚಾರ್ಯ ,ಸಾಂಸ್ಕೃತಿಕ ಮಂತ್ರಿಯಾಗಿ ಅನ್ವಿತಾ.ಎಸ್, ಸಂವಹನ ಮಂತ್ರಿಯಾಗಿ ೭ನೇ ತರಗತಿಯ ವಿದ್ಯಾರ್ಥಿನಿ ಹರ್ಷಲ್ ಡಿ.ರೈ, ಆರೋಗ್ಯ ಮಂತ್ರಿಯಾಗಿ ಸಾನ್ವಿ. ಜಿ, ನೀರಾವರಿ ಮಂತ್ರಿಯಾಗಿ ಸುಧನ್ವಾ ಕೆ, ವಿರೋಧ ಪಕ್ಷದ ನಾಯಕರಾಗಿ ತನ್ವಿ ಹಾಗೂ ಪ್ರಜನ್ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ನೇತೃತ್ವದಲ್ಲಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು.
ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಲಕ್ಷ್ಮೀ ಸುರೇಶ್, ಉಪಾಧ್ಯಕ್ಷ ಎಸ್ ಚಿನ್ಮಯ್, ಕಾರ್ಯದರ್ಶಿ ಕೆ ಎಲ್ ಶಶಾಂಕ್ ಹಾಗೂ ಜೊತೆ ಕಾರ್ಯದರ್ಶಿ ವೈಷ್ಣವಿ ಎಸ್ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್..ಇವರ ನೇತೃತ್ವದಲ್ಲಿ ಪ್ರತಿಜ್ಞಾ ವಿಧಿ ಕೈಗೊಂಡರು.
ನಂತರ ನಾಲ್ಕು ಶಾಲಾ ಹೌಸ್ಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಐರಾವತ ಗುಂಪಿನ ನಾಯಕನಾಗಿ ಪ್ರಣಿತ್, ನಾಯಕಿಯಾಗಿ ವಿವಿಕ್ತಾ ರೈ, ಕಾಮಧೇನು ಗುಂಪಿನ ನಾಯಕನಾಗಿ ವಿಹಾನ್ ಕೃಷ್ಣ, ನಾಯಕಿಯಾಗಿ ಸಾನ್ವಿ.ಆರ್, ಅಮೃತ ಗುಂಪಿನ ನಾಯಕನಾಗಿ ಜ್ಯೋತಿರಾದಿತ್ಯ, ನಾಯಕಿಯಾಗಿ ಮನಸ್ವಿ, ಕಲ್ಪವೃಕ್ಷ ಗುಂಪಿನ ನಾಯಕನಾಗಿ ಪ್ರಿಯಾಂಶುರಾವ್, ನಾಯಕಿಯಾಗಿ ಮಂದಿರಾ ಕಜೆ ಇವರು ಅತಿಥಿಗಳಿಂದ ಗುಂಪಿನ ಬಾವುಟಗಳನ್ನು ಸ್ವೀಕರಿಸಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹಿರಣ್ಮೆöÊ ಸ್ವಾಗತಿಸಿ, ಭವಿಷ್ಯ ಅತಿಥಿಗಳ ಪರಿಚಯ ಮಾಡಿದರು. ಅದಿತಿ ವಂದಿಸಿದರು. ಕುವಿರಾ ಹಾಗೂ ಆದ್ಯತಾ ಕಾರ್ಯಕ್ರಮ ನಿರೂಪಿಸಿದರು.
ಬಪ್ಪಳಿಗೆ ಆಂಬಿಕಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಪರಿಷತ್ ಉದ್ಘಾಟನೆ | ಚುನಾವಣೆಯಿಂದ ಪ್ರಜಾಪ್ರಭುತ್ವದ ಬಗೆಗೆ ಅರಿವು : ಡಾ. ಚಂದ್ರಶೇಖರ್
What's your reaction?
- 294c
- 294cc
- 2ai technology
- 2artificial intelegence
- 2avg
- 2bt ranjan
- 2co-operative
- 2crime news
- 1death news
- 1gl
- 1google for education
- 1independence
- 1jewellers
- 1karnataka state
- 1lokayuktha
- 1lokayuktha raid
- 1manipal
- 1minister krishna bairegowda
- 1mla ashok rai
- 1nidana news
- 1ptr tahasildar
- 1puttur
- 1puttur news
- 1puttur tahasildar
- 0revenue
- 0revenue department
- 0revenue minister
- 0society
- 0sowmya
- 0tahasildar
- 0tahasildar absconded
- 0udupi
Related Posts
KSOU:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ;ವಿವಿಧ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ನೇ ಶೈಕ್ಷಣಿಕ ಸಾಲಿನ ವಿವಿಧ ಶಿಕ್ಷಣ…
ಪಾಣಾಜೆ ವಿದ್ಯಾವರ್ಧಕ ಸಂಘದ ಮಹಾಸಭೆ | ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ ದೇವಸ್ಯ ಪುನರಾಯ್ಕೆ
ಪಾಣಾಜೆ: ಪಾಣಾಜೆ ವಿದ್ಯಾವರ್ಧಕ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅವರ…
ಅತಿಥಿ ಉಪನ್ಯಾಸಕರ ನೇಮಕ ವಿಳಂಬ: ಸೆಮಿಸ್ಟರ್ ಅವಧಿ ವಿಸ್ತರಣೆ!
ಮಂಗಳೂರು: ರಾಜ್ಯಾದ್ಯಂತ ಶೈಕ್ಷಣಿಕ ಕ್ಯಾಲೆಂಡರ್ ಯಥಾಸ್ಥಿತಿಗೆ ಬರುತ್ತಿದೆ ಎಂಬ ಆಶಾಭಾವ…
ಕರಾಟೆ: ಅಂಬಿಕಾದ ವಿದ್ಯಾಲಯದ ದೃಶಾನ ರಾಷ್ಟ್ರಮಟ್ಟಕ್ಕೆ ಆಯ್ಕೆ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ…
ಜುಲೈ 26: ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕಾರ್ಗಿಲ್ ವಿಜಯೋತ್ಸವ | ಕಾರ್ಗಿಲ್ ಯೋಧರಿಗೆ ಸ್ಮರಣಿಕೆ ನೀಡಿ ವಿಜಯೋತ್ಸವ, ರಕ್ಷಾಬಂಧನ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ …
ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ | ರಾಜೇಶ್ ಬನ್ನೂರು ಮನೆಗೆ ತಲುಪಿಸಿದ ಸನ್ಮಾನ
ಪುತ್ತೂರು: ಯಾರಲ್ಲಿ ಯಾವ ಪ್ರತಿಭೆ ಇದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ, ಪ್ರತೀಯೊಬ್ಬರಲ್ಲೂ…
ಅಕ್ಷಯ ಕಾಲೇಜಿನಲ್ಲಿ ಡ್ರೇಪಿಂಗ್ ಕಾರ್ಯಾಗಾರ
ಪುತ್ತೂರು: ಸಂಪ್ಯ ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗ "ಫಸೆರಾ" ಫ್ಯಾಷನ್…
ಪುತ್ತೂರು ಅಕ್ಷಯ ಸಮೂಹ ಸಂಸ್ಥೆಗಳ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪ್ರಜ್ಞಾನಮ್ ಸಂಸ್ಕೃತ ತರಬೇತಿ
ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ…
ಅಂಬಿಕಾದ ಅಡುಗೆಮನೆಗೆ ಆಧುನಿಕ ಸ್ಪರ್ಶ! ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ
ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ…
ನರೇಂದ್ರ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಭಿಷೇಕ್ ಹರ್ಷ, ಕಾರ್ಯದರ್ಶಿಯಾಗಿ ಸನಿಕ ಪಿ. ರೈ
ನರೇಂದ್ರ ಪಪೂ ಕಾಲೇಜಿನ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗೆ ಬುಧವಾರ…