ಕರಾವಳಿ

ಕಡಬ: ಸೇತುವೆ ಅಧಿಕೃತ ಉದ್ಘಾಟನೆಗೆ ಮುನ್ನವೇ ಲಕ್ಷ ರೂ ಮೌಲ್ಯದ ಸೋಲಾರ್ ದೀಪಗಳನ್ನು ಕದ್ದೊಯ್ದ ಕಳ್ಳರು

ಎಡಮಂಗಲ-ಕಡಬವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿರುವ ಪಿಜಕ್ಕಳದ ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ಲಕ್ಷ ರೂ ಬೆಲೆಬಾಳುವ ದಾರಿದೀಪಗಳನ್ನು ಕಳ್ಳರು ಕದ್ದೊಯ್ದ ಘಟನೆ ಡಿ.10 ರಾತ್ರಿ ನಡೆದಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ : ಎಡಮಂಗಲ-ಕಡಬವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿರುವ ಪಿಜಕ್ಕಳದ ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ಲಕ್ಷ ರೂ ಬೆಲೆಬಾಳುವ ದಾರಿದೀಪಗಳನ್ನು ಕಳ್ಳರು ಕದ್ದೊಯ್ದ ಘಟನೆ ಡಿ.10 ರಾತ್ರಿ ನಡೆದಿದೆ

ಇತ್ತೀಚೆಗೆ ಸುಳ್ಯ ಶಾಸಕಿ ಮುಂದಾಳತ್ವದಲ್ಲಿ ಸೇತುವೆಯನ್ನು ತಾತ್ಕಾಲಿಕವಾಗಿ ಉದ್ಘಾಟಿಸಿದ ಬಳಿಕ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಧಿಕವಾಗಿದೆ. ಈ ಸೇತುವೆ ನಿರ್ಮಾಣದ ನಂತರ ಲೋಕೋಪಯೋಗಿ ಇಲಾಖೆಯು ಸೋಲಾರ್ ಬೀದಿ ದೀಪಗಳನ್ನು ಕೂಡ ಅಳವಡಿಸಲಾಗಿತ್ತು. ಇದೀಗ ಎರಡು ಸೋಲಾರ್ ದೀಪಗಳನ್ನು ಕಳ್ಳರು ಎಗರಿಸಿದ್ದಾರೆ.

SRK Ladders

ಈ ನೂತನ ಸೇತುವೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಸಹಿತ ಕಳ್ಳಸಾಗಣೆಯಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಉಳಿದ ದಾರಿ ದೀಪಗಳು ಕಳ್ಳರ ಪಾಲಾಗಲಿದ್ದು ಸ್ಥಳೀಯಾಡಳಿತ ಮತ್ತು ಪೊಲೀಸರು ಕ್ರಮ ಕೈಗೊಳ್ಳುವಂತೆ ಆ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.

ಸುಳ್ಯ-ಕಡಬ ಉಭಯ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಈ ಪ್ರದೇಶಕ್ಕೆ ಪೊಲೀಸರು ಗಸ್ತು ತಿರುಗಬೇಕು ಜೊತೆಗೆ ಸೇತುವೆ ಬಳಿ ಸಿಸಿಟಿವಿ ಅಳವಡಿಸಬೇಕಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…