ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2
ಗ್ರಾ.ಪಂ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 2 ವಾರ್ಡ್ ಗಳಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ವಿಧಾನಸಭೆ ಚುನಾವಣೆ ನಡೆದ ಒಂದೂವರೆ ವರ್ಷದ ಬಳಿಕ ನಡೆದ ಈ ಚುನಾವಣೆ ಶಾಸಕ ಅಶೋಕ್ ರೈ ಕಾರ್ಯವೈಖರಿಯ ಅಗ್ನಿ ಪರೀಕ್ಷೆ ಎಂದೆ ಸಾರ್ವಜನಿಕ ವಲಯದಲ್ಲಿ ಬಿಂಬಿತವಾಗಿತ್ತು. ಈ ಅಗ್ನಿ ಪರೀಕ್ಷೆಯಲ್ಲಿ ಅಶೋಕ್ ರೈಯವರು ಯಶಸ್ವಿಯಾಗಿ ತೇರ್ಗಡೆ ಹೊಂದಿದ್ದಾರೆ
ಕೆದಂಬಾಡಿ ಗ್ರಾ.ಪಂನ ಒಂದು ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ 30 ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೆರೋ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿಯವರ ನಿಧನದಿಂದ ಈ ಸ್ಥಾನ ತೆರವಾಗಿತ್ತು.
ಕಾಂಗ್ರೆಸ್ ನಿಂದ ಮೆಲ್ವಿನ್ ಮೊಂತೆರೋ, ಬಿಜೆಪಿಯಿಂದ ಮೋಹನ್ ತಿಂಗಳಾಡಿ ಹಾಗೂ ಎಸ್.ಡಿ.ಪಿ.ಐನಿಂದ ರಫೀಕ್ ನಂಜೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೋಂತೆರೋ, 272 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ. ಮೋಹನ್ 242 ಹಾಗೂ ಎಸ್ಲಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ 108 ಮತಗಳನ್ನು ಪಡೆದುಕೊಂಡಿದ್ದಾರೆ. 11 ಮತ ತಿರಸ್ಕೃತಗೊಂಡಿದೆ.
ಅರಿಯಡ್ಕ ಗ್ರಾ.ಪಂನ ಮಾಡೂರು 2ನೇ ವಾರ್ಡ್ ಪ.ಜಾತಿಗೆ ಮೀಸಲಿರಿಸಿದ ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಂಕರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನಯ ಕುಮಾರ್ 433 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಎ.ಕೆ ಮಾಡ್ಯೂರು 289 ಮತ ಪಡೆದುಕೊಂಡಿದ್ದಾರೆ. 10 ಮತ ತಿರಸ್ಕೃತಗೊಂಡಿದೆ