ಕರಾವಳಿ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ 8.06 ಕೋಟಿ ರೂ. ದಾಖಲೆಯ ಲಾಭ

GL

ಈ ಸುದ್ದಿಯನ್ನು ಶೇರ್ ಮಾಡಿ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು 2025-26ನೇ ಸಾಲಿನಲ್ಲಿ ದಾಖಲೆಯ ರೂ. 8.06 ಕೋಟಿ ಲಾಭ ಗಳಿಸಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ತಿಳಿಸಿದ್ದಾರೆ.

chennai-shopping
maithri

ಸೊಸೈಟಿ ತನ್ನ ಕಾರ್ಯವ್ಯಾಪ್ತಿಯನ್ನು ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು ದಕ್ಷಿಣ ಕನ್ನಡ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಕೈಗಾರಿಕಾ ಶಾಖೆ ಸಹಿತ 17 ಬ್ಯಾಂಕಿಂಗ್ ಶಾಖೆಗಳನ್ನು ಮಂಗಳೂರು, ಪುತ್ತೂರು, ಕೋಟೇಶ್ವರ, ಕಿನ್ನಿಗೋಳಿ, ಬೆಳ್ಳಂಪಳ್ಳಿ, ಕುಂದಾಪುರ, ಉಡುಪಿ, ಪಡುಬಿದ್ರಿ, ಕುಳಾಯಿ, ಪೆರ್ಡೂರು, ಸಂತೆಕಟ್ಟೆ-ಕಲ್ಯಾಣಪುರ, ಕೊಟ್ಟಾರಚೌಕಿ, ಶಿರ್ವ-ಮಂಚಕಲ್, ಗುರುವಾಯನಕೆರೆ, ಮುಡಿಪು, ಮೂಡುಬಿದಿರೆ ಮತ್ತು ಹಿರಿಯಡ್ಕದಲ್ಲಿ ಹೊಂದಿದೆ.

2026ರ ಮಾರ್ಚ್ ಅಂತ್ಯಕ್ಕೆ 23529 ಸದಸ್ಯರಿದ್ದು ರೂ. 7.34 ಕೋಟಿ ಪಾಲು ಬಂಡವಾಳವಿರುತ್ತದೆ. ನಿಧಿಗಳು ರೂ. 29.82 ಕೋಟಿ, ಧನವಿನಿಯೋಗಗಳು ರೂ. 65.56ಕೋಟಿ ಇದ್ದು ದುಡಿಯುವ ಬಂಡವಾಳ ರೂ.355.16 ಕೋಟಿಯಿರುತ್ತದೆ. ಸಾಲದ ಹೊರಬಾಕಿ ಮೊತ್ತ ರೂ. 288.86 ಕೋಟಿ ಇದ್ದು, ಕಳೆದ ಸಾಲಿಗಿಂತ ರೂ. 48.54 ಕೋಟಿ ಹೊರಬಾಕಿ ಸಾಲ ಹೆಚ್ಚಳಗೊಂಡಿದ್ದು ಶೇಕಡಾ 20.19ರಷ್ಟು ಪ್ರಗತಿಯನ್ನು ಸಾಧಿಸಿದೆ. ರೂ. 317.01ಕೋಟಿ ಠೇವಣಿ ಇದ್ದು, ಕಳೆದ ಸಾಲಿಗಿಂತ ರೂ. 63.15ಕೋಟಿ ಠೇವಣಿ ಹೆಚ್ಚಳಗೊಂಡಿದ್ದು, ಶೇಕಡಾ 24.88ರಷ್ಟು ವೃದ್ಧಿಯಾಗಿರುತ್ತದೆ. ಸೊಸೈಟಿಯ ಮೇಲೆ ಅಭಿಮಾನ ವಿಟ್ಟು ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸಿದ ಕಾರಣದಿಂದಾಗಿ ಕಳೆದ ವರ್ಷ ಇದ್ದ ಶೇಕಡಾ 2.75 ಸುಸ್ತಿ ಸಾಲ ಪ್ರಮಾಣವು ಕಡಿಮೆಯಾಗಿ ಈ ವರ್ಷ ಕೇವಲ ಶೇಕಡಾ 1.60ರಷ್ಟಿರುತ್ತದೆ.

ಪ್ರಸ್ತುತ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಪಿ. ಉಪೇಂದ್ರ ಆಚಾರ್ಯ, ಉಪಾಧ್ಯಕ್ಷರಾಗಿ ಎ. ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಕರಾಗಿ ಯಜ್ಞೇಶ್ವರ ಹಾಗೂ ನಿರ್ದೇಶಕರುಗಳಾಗಿ ಕೆ. ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ ಜಯ ಆಚಾರ್, ಕೆ ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್ ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ. ರಮೇಶ್ ರಾವ್ ಯು, ಕೆ. ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್. ಅವರನ್ನೊಳಗೊಂಡ ತಂಡದ ನಾಯಕತ್ವದಲ್ಲಿ ಹಾಗೂ ಮುಂದಾಳುತ್ವದಲ್ಲಿ ಸಂಸ್ಥೆ ಪ್ರಗತಿ ಪಥದಲ್ಲಿ ಸಾಗುತ್ತಿದೆ.

ಉತ್ತಮ ಸಹಕಾರಿ ಸಂಸ್ಥೆಯಾಗಿ ಬೆಳೆಸುವ ಆಶಯ:

ಸದಸ್ಯ – ಗ್ರಾಹಕರ ಪ್ರೋತ್ಸಾಹ -ಸಹಕಾರ, ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಕಾರ್ಯಪರತೆ, ಮತ್ತು ಸಿಬ್ಬಂದಿಗಳ ಸೇವಾನಿಷ್ಠೆಯಿಂದ 2025-26ನೇ ಸಾಲಿನಲ್ಲಿ ನಮ್ಮ ಸೊಸೈಟಿ ವರದಿ ಸಾಲಿನಲ್ಲಿ ದಾಖಲೆಯ ರೂ. 8.06 ಕೋಟಿ ಲಾಭ ಗಳಿಸಿರುತ್ತದೆ. ಜನ ಸಾಮಾನ್ಯರಿಗೆ ಉತ್ತಮ ಸೇವೆ ನೀಡಿ “ಗೋಲ್ಡ್ ಬ್ಯಾಂಕ್” ಎಂದೇ ಪ್ರಖ್ಯಾತಿ ಹೊಂದಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಹಕಾರಿ ಸಂಸ್ಥೆಯಾಗಿ ಬೆಳೆಸುವ ಆಶಯ ನಮ್ಮದಾಗಿದೆ. ಅದಕ್ಕಾಗಿ ಮುಂದೆಯೂ ಸರ್ವರ ಸಹಕಾರವನ್ನು ಸದಾ ಬಯಸುತ್ತೇವೆ.

– ಪಿ. ಉಪೇಂದ್ರ ಆಚಾರ್ಯ, ಅಧ್ಯಕ್ಷ, ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts