Gl harusha
ನಿಧನ

ಹೆಸರಾಂತ ಕಿಡ್ನಿ ಕಸಿ ಡಾಕ್ಟರ್ ಶವವಾಗಿ ಪತ್ತೆ!

ಪ್ರಸಿದ್ಧ ಮೂತ್ರಪಿಂಡಶಾಸ್ತ್ರಜ್ಞ (Kidney specialist)  ಮತ್ತು ಹಿರಿಯ ಶಸ್ತ್ರಚಿಕಿತ್ಸಕ ಡಾ. ಜಾರ್ಜ್ ಪಿ ಅಬ್ರಹಾಂ (74) ಅವರು ಎರ್ನಾಕುಲಂ ಜಿಲ್ಲೆಯ ಅವರ ಫಾರ್ಮ್‌ ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕೇರಳದ (Kerala) ಪ್ರಸಿದ್ಧ ಮೂತ್ರಪಿಂಡಶಾಸ್ತ್ರಜ್ಞ (Kidney specialist)  ಮತ್ತು ಹಿರಿಯ ಶಸ್ತ್ರಚಿಕಿತ್ಸಕ ಡಾ. ಜಾರ್ಜ್ ಪಿ ಅಬ್ರಹಾಂ (74) ಅವರು ಎರ್ನಾಕುಲಂ ಜಿಲ್ಲೆಯ ಅವರ ಫಾರ್ಮ್‌ ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

srk ladders
Pashupathi

ಡಾ. ಅಬ್ರಹಾಂ ಕಳೆದ 25 ವರ್ಷಗಳಲ್ಲಿ 2,500 ಕ್ಕೂ ಹೆಚ್ಚು ಕಿಡ್ನಿ ಕಸಿ ಮಾಡಿದ್ದರು. ಆಸ್ಪತ್ರೆಯ ದಾಖಲೆಗಳ ಪ್ರಕಾರ ಜೀವಂತ ದಾನಿಯೊಬ್ಬರ ಲ್ಯಾಪರೊಸ್ಕೋಪಿಕ್ ಮೂತ್ರಪಿಂಡ ಕಸಿ ನಡೆಸಿದ ವಿಶ್ವದ ಮೂರನೇ ಶಸ್ತ್ರಚಿಕಿತ್ಸಕರಾಗಿದ್ದರು. ಆದರೆ ಆರು ತಿಂಗಳ ಹಿಂದೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರ ಕೈ ನಡುಕ ಬರುತಿತ್ತು ಎಂದು ವರದಿಗಳು ಹೇಳಿವೆ.

ಸದ್ಯ ನೇಣು ಬಿಗಿದುಕೊಂಡಿದ್ದ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದೇ ಪ್ರಾವೀಣ್ಯತೆಯೊಂದಿಗೆ ವೈದ್ಯಕೀಯ ವೃತ್ತಿ ಮುಂದುವರಿಸಲು ಹೆಣಗಾಡುತ್ತಿರುವುದಾಗಿ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts