ಪುತ್ತೂರು: ತಾಲೂಕು ನಿವೃತ್ತ ಪತ್ರಾಂಕಿತ ಖಜಾನಾಧಿಕಾರಿ ವಿಠಲ ಆಚಾರಿ ಅವರ ಪುತ್ರ, ಮುಂಡೂರು ನಿವಾಸಿ, ಸಿವಿಲ್ ಇಂಜಿನೀಯರ್ ಅರುಣ್ (51 ವ.) ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾದರು.
ಮೂಲತಃ ಬನ್ನೂರು ಮೇಲ್ಮಜಲು ನಿವಾಸಿಯಾಗಿರುವ ಇವರು, ಮುಂಡೂರಿನಲ್ಲಿ ವಾಸವಾಗಿದ್ದಾರೆ.
ಶುಕ್ರವಾರ ಸಂಜೆ ಪುತ್ತೂರಿನ ಹೋಟೆಲೊಂದರಲ್ಲಿ ಟೀ ಕುಡಿಯುತ್ತಿದ್ದ ವೇಳೆ ಹೃದಯ ನೋವು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಫಲಕಾರಿಯಾಗಿಲ್ಲ.
ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದ ಅರುಣ್ ಅವರು, ಸಹರ್ಷಂ ಸಿಟಿ ಲೇಔಟಿನ ಇಂಜಿನೀಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ತಂದೆ ನಿವೃತ್ತ ಪತ್ರಾಂಕಿತ ಖಜಾನಾಧಿಕಾರಿ ಬಿ. ವಿಠಲ ಆಚಾರಿ, ತಾಯಿ ರೂಪಾ ವಿಠಲ ಆಚಾರಿ, ಪತ್ನಿ ಸವಣೂರು ಹಿ.ಪ್ರಾ. ಶಾಲಾ ಶಿಕ್ಷಕಿ ಶಶಿಕಲಾ, ಪುತ್ರರಾದ ಅಖಿಲ್, ಅಥರ್ವ್, ಸಹೋದರರಾದ ಎಸ್.ಕೆ.ಜಿ.ಐ ಬ್ಯಾಂಕ್ ಮ್ಯಾನೇಜರ್ ಕಿರಣ್ ಬಿ.ವಿ., ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ, ಸವಣೂರು ಶಾಲಾ ಶಿಕ್ಷಕ ಕಿಶನ್ ಬಿ.ವಿ. ಅವರನ್ನು ಅಗಲಿದ್ದಾರೆ.
ಅಂತಿಮ ವಿಧಿವಿಧಾನ:
ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮುಂಡೂರಿನ ಮನೆಗೆ ಕೊಂಡೊಯ್ಯಲಿದ್ದಾರೆ. ಬಳಿಕ ಅಲ್ಲಿ ವಿಧಿವಿಧಾನ ನಡೆಯಲಿದೆ.


























