ನಿಧನ

ಜೀವನ್ ರಾಮ್ ಸುಳ್ಯ ಅವರಿಗೆ ಪಿತೃವಿಯೋಗ | ಯಕ್ಷಗಾನ ಹಿರಿಯ ಕಲಾವಿದ ಸುಜನಾ ಸುಳ್ಯ ಖ್ಯಾತಿಯ ಎಸ್.ಎನ್. ಜಯರಾಮ್ ಇನ್ನಿಲ್ಲ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ: ಹಿರಿಯ ಯಕ್ಷಗಾನ ಕಲಾವಿದ ಮತ್ತು ರಂಗಕರ್ಮಿ ಸುಜನಾ ಸುಳ್ಯ (ಎಸ್.ಎನ್. ಜಯರಾಮ್) ಶುಕ್ರವಾರ ಬೆಳಿಗ್ಗೆ ವಿಧಿವಶರಾದರು.

ವಯೋಸಹಜ ನಿಶ್ಶಕ್ತಿಯಿಂದಿದ್ದ ಅವರು ಎರಡು ದಿನಗಳಿಂದ ಆರೋಗ್ಯ ಹದಗೆಟ್ಟು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

akshaya college

ಸುಜನಾ ಸುಳ್ಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಯರಾಮ ನಾವೂರು ಅವರು ಯಕ್ಷಗಾನದಲ್ಲಿ ಬಹುಮುಖ ಕಲಾವಿದರಾಗಿದ್ದರು. ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಅವರು ಸುಳ್ಯ ತಾಲೂಕಿನ ‘ರಂಗಮನೆ’ ಎಂಬ ಕಲಾ ಕೇಂದ್ರದ ರೂವಾರಿ ಮತ್ತು ನಿರ್ದೇಶಕ ಜೀವನ್‌ರಾಮ್ ಸುಳ್ಯ ಅವರ ತಂದೆ.

ರಂಗಮನೆಯ ಯಕ್ಷಗಾನ ಮತ್ತು ರಂಗಭೂಮಿ ಸೇರಿದಂತೆ ವಿವಿಧ ಸಾಂಸ್ಕ ತಿಕ ಚಟುವಟಿಕೆಗಳಲ್ಲಿಯೂ ಸುಜನಾ ತೊಡಗಿಸಿಕೊಂಡಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts