pashupathi
ನಿಧನ

ಮುರದಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಪೂರ್ವ ಮೃತ್ಯು!! ಮನೆಗೆ ತೆರಳುತ್ತಿದ್ದ ಕಾರಿಗೆ ರಭಸದಿಂದ ಅಪ್ಪಳಿಸಿದ್ದ ಬಸ್!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೇ 27ರಂದು ಪುತ್ತೂರಿನ ಮುರ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 32 ವರ್ಷದ ಅಪೂರ್ವ ಕೆ. ಭಟ್‌ ಅವರು, 134 ದಿನಗಳ ಹೋರಾಟದ ಬಳಿಕ ಅಕ್ಟೋಬರ್ 7ರಂದು ಸಂಜೆ 6 ಗಂಟೆಗೆ ಕೊನೆಯುಸಿರೆಳೆದರು.

akshaya college

ಅಪಘಾತದ ದಿನದಿಂದಲೂ ಪತ್ನಿ ಬದುಕಿ ಬರಲಿ, ಮಗಳಿಗೆ ತಾಯಿ ಪ್ರೀತಿ ಸಿಗಲಿ ಎಂಬ ಕನಸಿನಲ್ಲಿ ಪತಿ ಆಶಿಶ್ ಸರಡ್ಕ ಅವರು ಸಾಮಾಜಿಕ ಜಾಲತಾಣದಲ್ಲಿ ನಿರಂತರ ಪ್ರಾರ್ಥನೆಗೆ ಮನವಿ ಮಾಡುತ್ತಿದ್ದರು. ಸಾವಿರಾರು ಜನರು ಪರಿಚಯ–ಅಪರಿಚಯವಿಲ್ಲದೇ ಕೈ ಜೋಡಿಸಿ ಆಶೀರ್ವದಿಸಿದರೂ, ಕೊನೆಗೂ ಆ ಪ್ರಾರ್ಥನೆ ಫಲಿಸಲಿಲ್ಲ.

ನಾಲ್ಕು ತಿಂಗಳ ಪ್ರಾರ್ಥನೆಗೆ ಫಲ ಇಲ್ಲ

ಅಪೂರ್ವ ಕಳೆದ 134 ದಿನಗಳ ಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವು–ಬದುಕಿನ ನಡುವೆಯೇ ಹೋರಾಡುತ್ತಿದ್ದರು. ಕೆಲ ದಿನಗಳು ಚೇತರಿಕೆ ಕಂಡರೂ ಮತ್ತೆ ಸ್ಥಿತಿ ಹದಗೆಟ್ಟಿತ್ತು.
“134 ದಿನಗಳ ಪ್ರಯಾಣ ಇಂದು ಮುಗಿಯಿತು.. ಅಪೂರ್ವ ಈಗ ನಮ್ಮೊಂದಿಗೆ ಇಲ್ಲ. ಆಕೆ ನೆನಪು ಮಾತ್ರ” ಎಂದು ಪತಿ ಆಶಿಶ್ ಸೋಶಿಯಲ್ ಮೀಡಿಯಾದಲ್ಲಿ ಹೃದಯವಿದ್ರಾವಕವಾಗಿ ಬರೆದುಕೊಂಡಿದ್ದಾರೆ.

ಪ್ರೀತಿಯ ನೆನಪು ಮಾತ್ರ ಉಳಿದುಕೊಂಡಿತು

ಬೆಂಗಳೂರು ಮೂಲದ ಆಶಿಶ್–ಅಪೂರ್ವ ದಂಪತಿ ಮಂಗಳೂರಿನವರೇ. ಇವರಿಗೆ ಮುದ್ದಾದ ಮಗಳಿದ್ದಾಳೆ. ಬಸ್‌ ಅಪಘಾತದಿಂದ ಕುಟುಂಬವೇ ತತ್ತರಿಸಿ ಹೋಗಿದ್ದು, ತಂದೆ ಈಶ್ವರ್ ಭಟ್ ಹಾಗೂ ಮಗಳು ಅಪಾಯದಿಂದ ಪಾರಾದರೂ, ಅಪೂರ್ವ ಮಾತ್ರ ಬದುಕಿನ ಹೋರಾಟದಲ್ಲಿ ಸೋತು ನೆನಪಾಗಿ ಉಳಿದುಕೊಂಡಿದ್ದಾರೆ.

ಅಪಘಾತ ಹೇಗೆ ನಡೆದಿದೆ?

ಮೇ 27ರಂದು ರಾತ್ರಿ ಪುತ್ತೂರು ಪೇಟೆಯಿಂದ ಮನೆಗೆ ತೆರಳುತ್ತಿದ್ದ ಅಪೂರ್ವ ಕುಟುಂಬದ ಕಾರಿಗೆ, ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಮರ್ಸಿ ಬಸ್ ಡಿಕ್ಕಿ ಹೊಡೆದಿತ್ತು. ಭೀಕರ ಝಟಕಕ್ಕೆ ಕಾರು ನುಜ್ಜುಗುಜ್ಜಾಗಿತ್ತು. ತಂದೆ–ಮಗಳು ಪಾರಾದರು. ಆದರೆ ತಾಯಿ ಹೃದಯ ಕಲೆಹಾಕುವ ಹೋರಾಟ ನಡೆಸಿ ಕೊನೆಗೆ ವಿಧಿವಶರಾದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts