pashupathi
ನಿಧನ

ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಅಗರಿ ಮೋಹನ್ ದಾಸ್‌ ಭಂಡಾರಿ ನಿಧನ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಪುತ್ತೂರು ಮೂಲದ ಅಗರಿ ಮೋಹನ್ ದಾಸ್ ಭಂಡಾರಿ (76) ರವರು ಅ. 5 ರಂದು ರಾತ್ರಿ ಬೆಂಗಳೂರಿನ ಸಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

akshaya college

ಮೃತರು ಪತ್ನಿ ಶಕುಂತಲಾ ಭಂಡಾರಿ, ಪುತ್ರಿಯರಾದ ಭವ್ಯ, ದಿವ್ಯಾ, ಅಳಿಯಂದಿರಾದ ನಿತಿನ್ ರೈ, ವಿಜೇಶ್ ಶೆಟ್ಟಿ, ಸಹೋದರರಾದ ಕರ್ನಲ್ ಎ.ಜೆ. ಭಂಡಾರಿ, ಆರ್ ಬಿಐ ಮಾಜಿ ನಿರ್ದೇಶಕ ಸಹಕಾರ ರತ್ನ ಅಗರಿ ನವೀನ್ ಭಂಡಾರಿ, ಅಗರಿ ಭಗವಾನ್ ದಾಸ್ ಭಂಡಾರಿ, ಸಹೋದರಿ ಶೋಭಾ ಚಂದ್ರಹಾಸ ಶೆಟ್ಟಿ ಯವರನ್ನು ಅಗಲಿದ್ದಾರೆ.

ಮೋಹನ್‌ ದಾಸ್‌ ಭಂಡಾರಿ ಅವರು ದೆಹಲಿ, ಜೆಮ್ ಶೆಡ್‌ ಪುರ, ಮದ್ರಾಸ್, ಕಲ್ಕತ್ತಾ, ಬೆಂಗಳೂರು ಹೊಸೂರು, ಮೂಡಲಪಾಲ್ಯ, ದೊಮ್ಮಲೂರು ಸೇರಿದಂತೆ ವಿಜಯ ಬ್ಯಾಂಕ್‌ನಲ್ಲಿ 35 ವರ್ಷ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಅ. 7 ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಅ. 7 ರಂದು ಬೆಳಿಗ್ಗೆ 9 ರಿಂದ 9.30 ರತನಕ ಮೃತರ ಅಂತಿಮ ದರ್ಶನವನ್ನು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪಡೆಯಬಹುದು, ಬಳಿಕ 12.30 ಕ್ಕೆ ವಿಟ್ಲ ಅಳಿಕೆ ತಾಳಿಪಡ್ಡು ಎಂಬಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೃತರ ಸಹೋದರ ಅಗರಿ ನವೀನ್ ಭಂಡಾರಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts