pashupathi
ನಿಧನ

ಹಿರಿಯ ಸಾಹಿತಿ, ಕಾದಂಬರಿಕಾರ ಡಾ. ಎಸ್‌.ಎಲ್. ಭೈರಪ್ಪ ನಿಧನ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ನಾಡಿನ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ (94) ನಿಧನರಾಗಿದ್ದಾರೆ.

akshaya college

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ವಾಸವಿದ್ದ ಸಾಹಿತಿ, ಪದ್ಮಭೂಷಣ ಎಸ್.ಎಲ್ ಭೈರಪ್ಪ ಬುಧವಾರ ಕೊನೆಯುಸಿರೆಳೆದರು ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ.

ಎಸ್‌ ಎಲ್ ಭೈರಪ್ಪ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಕನ್ನಡ ಸಾರಸ್ವತ ಲೋಕದ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (ಆಗಸ್ಟ್ 20, 1931- ಸೆಪ್ಟೆಂಬರ್ 24, 2025) ಕಾದಂಬರಿಕಾರರಾಗಿ, ತತ್ವಜ್ಞಾನಿಯಾಗಿ, ಚಿತ್ರಕಥೆಗಾರರಾಗಿ ಜನಮಾನಸಕ್ಕೆ ಹತ್ತಿರವಾದವರು. ಅವರ ಕೃತಿಗಳು ಆಧುನಿಕ ಭಾರತದ ಜನಪ್ರಿಯ ಕಾದಂಬರಿಗಳಾಗಿ ಪ್ರಚಲಿತವಾಗಿವೆ. ಕಾದಂಬರಿಗಳ ವಿಷಯ, ರಚನೆ ಮತ್ತು ಪಾತ್ರಗಳ ನಿರೂಪಣೆಯ ವಿಷಯ ವಿಶಿಷ್ಟವಾಗಿದ್ದು, ಇವರ ಲೇಖನಗಳು ಕರ್ನಾಟಕದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿತ್ತು. ಅವರ ಪುಸ್ತಕಗಳನ್ನು ಹಿಂದಿ ಮತ್ತು ಮರಾಠಿಗೆ ಅನುವಾದಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts