ಚೆನ್ನೈ: ತಮಿಳಿನ ಪ್ರಸಿದ್ಧ ಹಾಸ್ಯ ಕಲಾವಿದ, ಸಿನಿಮಾ ನಟ ರೋಬೋ ಶಂಕರ್ (46) ಮೃತಪಟ್ಟಿದ್ದಾರೆ.
ಗುರುವಾರ ಟಿ. ವಿ.ಚ್ಯಾನಲ್ ಕಾರ್ಯಕ್ರಮವೊಂದರ ಚಿತ್ರೀಕರಣದ ನಡುವೆ ಕುಸಿದು ಬಿದ್ದ ಅವರು ರಾತ್ರಿ ವೇಳೆ ಆಸ್ಪತ್ರೆಯಲ್ಲಿ ನಿಧನರಾದರು.
ಮಿಮಿಕ್ರಿ ಕಲಾವಿದನಾದ ಶಂಕರ್ ವೇದಿಕೆಯಲ್ಲಿ ಯಂತ್ರಮಾನವನನ್ನು ಪ್ರದರ್ಶಿಸುವುದರಲ್ಲಿ ಜನಪ್ರಿಯರಾದ ಹಿನ್ನೆಲೆಯಲ್ಲಿ ಅವರಿಗೆ ರೋಬೋ ಶಂಕರ್ ಎಂದೇ ಹೆಸರಾಗಿತ್ತು. ಸಿನಿಮ, ಟಿ. ವಿ ಧಾರವಾಹಿ, ವೆಬ್ ಸೀರೀಸ್ ಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಕಿಡ್ನಿ ಮತ್ತು ಕರುಳು ಸಂಬಂಧ ಕಾಯಿಲೆಯಿಂದ ಅವರು ಮೃತಪಟ್ಟರೆನ್ನಲಾಗಿದೆ. ಮೃತರು ಕಿರುತೆರೆ ಕಲಾವಿದೆಯಾದ ಪತ್ನಿ ಪ್ರಿಯಾಂಕ ಹಾಗೂ ಪುತ್ರಿ ಇಂದ್ರಜ (ಬಾಲನಟಿ) ಅವರನ್ನಗಲಿದ್ದಾರೆ