ಪುತ್ತೂರು: ಹರ್ಷೋದಯ ಜ್ಯುವೆಲ್ಸ್ ಮಾಲಕ, ದರ್ಬೆ ನಿವಾಸಿ ಹರಿಶ್ಚಂದ್ರ ಆಚಾರ್ಯ ಅವರ ಪತ್ನಿ ಸುಚಿತ್ರಾ ಹರಿಶ್ಚಂದ್ರ ಆಚಾರ್ಯ ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಕೋರ್ಟ್ ರಸ್ತೆಯಲ್ಲಿರುವ ಹರ್ಷೋದಯ ಜ್ಯುವೆಲ್ಸ್ ಅನ್ನು ಮುನ್ನಡೆಸಲು ಪತಿಗೆ ಹೆಗಲು ನೀಡಿದ್ದರು.
ಮೃತರು ಪತಿ ಹರಿಶ್ಚಂದ್ರ ಆಚಾರ್ಯ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.