ಪುತ್ತೂರು: ಪುತ್ತೂರಿನ ಮೊದಲ ಕಿನ್ನಿ ಪಿಲಿ ‘ಪಿಲಿ ರಾಧಣ್ಣ’ ಎಂದೇ ಖ್ಯಾತರಾದ, 48 ವರ್ಷಗಳ ಕಾಲ ಹುಲಿವೇಷ ಧರಿಸಿದ ರಾಧಾಕೃಷ್ಣ ಶೆಟ್ಟಿ ಹೃದಯಾಘಾತದಿಂದ ನಿಧನರಾದರು.
ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರಾಂಡ್ ತಂದುಕೊಟ್ಟವವರು ಪಿಲಿ ರಾಧಣ್ಣ. ಪುತ್ತೂರಿನ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿ ಅವರು ಹತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರಾದವರು.
ಕೋವಿಡ್ ಮೊದಲು ನಾಲ್ಕು ದಿನ ಇದ್ದ ಪಿಲಿ ವೇಷ ಸಂಚಾರ ಈಗ ಒಂದು ದಿನ ನಡೆಯುತ್ತದೆ.
ತಂದೆ ಸಂಕಪ್ಪ ಶೆಟ್ಟಿ 30 ವರ್ಷ ಹುಲಿ ವೇಷ ಹಾಕಿದರೆ, ಅವರ ಪುತ್ರ ರಾಧಣ್ಣ 48 ವರ್ಷಗಳಿಂದ ವೇಷಧಾರಿ. ಪ್ರಸ್ತುತ ರಾಧಣ್ಣ ಅವರ ಪುತ್ರ ಅಭಿಷೇಕ್ ಶೆಟ್ಟಿ ವೇಷ ಹಾಕುತ್ತಾರೆ. ಹೀಗೆ ಮೂರನೇ ತಲೆಮಾರು ಪಿಲಿ ಕುಣಿತದಲ್ಲಿ ತೊಡಗಿದೆ.
ಮೃತರು ಪತ್ನಿ ಸುನಂದ, ಪುತ್ರಿ ಅಶ್ವಿನಿ , ಪುತ್ರರಾಧ ಅವಿನಾಶ್ ಹಾಗೂ ಅಭಿಷೇಕ್ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.