ನಿಧನ

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ ನಿಧನ!!

ಈ ಸುದ್ದಿಯನ್ನು ಶೇರ್ ಮಾಡಿ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ 81ನೇ ವಯಸ್ಸಿನಲ್ಲಿ ದೆಹಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

akshaya college

ಶಿಬು ಸೊರೆನ್ ಅವರ ಮಗ ಮತ್ತು ಹಾಲಿ ಮುಖ್ಯಮಂತ್ರಿ ಹೇಮನ್ ಸೊರೆನ್ ಅವರು ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಪೂಜ್ಯ ಗುರು ದಿಶೋಮ್ ನಮ್ಮೆಲ್ಲರನ್ನೂ ಅಗಲಿದ್ದಾರೆ. ಇಂದು ನಾನು ಎಲ್ಲವನ್ನು ಕಳೆದುಕೊಂಡಿದ್ದೇನೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಶಿಬು ಸೊರೆನ್ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಿಸದೇ ಇಂದು (ಆಗಸ್ಟ್ 04) ಕೊನೆಯುಸಿರೆಳೆದಿದ್ದಾರೆ.

ತಮ್ಮ ಬೆಂಬಲಿಗರಿಂದ ‘ದಿಶೂಮ್ ಗುರು’ (ಮಹಾನ್ ನಾಯಕ) ಎಂದು ಕರೆಯಲ್ಪಡುವ ಶಿಬು ಸೊರೆನ್, ಭಾರತೀಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಬುಡಕಟ್ಟು ಜನಾಂಗದ ಒಬ್ಬ ಉನ್ನತ ನಾಯಕ ಮತ್ತು ಜೆಎಂಎಂ ಸ್ಥಾಪಕ ವ್ಯಕ್ತಿಗಳಲ್ಲಿ ಒಬ್ಬರಾದ ಶಿಬು ಸೊರೆನ್ ಸುಮಾರು ನಾಲ್ಕು ದಶಕಗಳ ಕಾಲ ಪಕ್ಷವನ್ನು ಮುನ್ನಡೆಸಿದರು. 1987 ರಲ್ಲಿ ಜೆಎಂಎಂ ಆಡಳಿತವನ್ನು ವಹಿಸಿಕೊಂಡರು ಮತ್ತು 2025ರ ಏಪ್ರಿಲ್‌ವರೆಗೆ ಅದರ ಅಧ್ಯಕ್ಷರಾಗಿದ್ದರು.

.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಶಾಲಾ ವಾಹನದ ಚಾಲಕನಿಗೆ ಹೃದಯಾಘಾತ: ಸಾವು| ವಿದ್ಯಾರ್ಥಿಗಳ ಪ್ರಾಣ ಉಳಿಸಿ ಸಮಯ ಪ್ರಜ್ಞೆ ಮೆರೆದ ಮೊಯ್ದಿನ್  ಬಾವ!!

ಮಣಿಪಾಲ: ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ…

ಬನ್ನೂರು ಶ್ರೀ ಶನೀಶ್ವರ ಸನ್ನಿಧಿ ಸಂಚಾಲಕ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಅವರಿಗೆ ಪಿತೃವಿಯೋಗ!

ಪುತ್ತೂರು: ಬನ್ನೂರು ಶ್ರೀ ಶನೀಶ್ವರ ಸನ್ನಿಧಿ ಸಂಚಾಲಕ, ಪುತ್ತೂರು ತಾಲೂಕು ಯುವಜನ ಒಕ್ಕೂಟದ…