ಪುತ್ತೂರು: ದರ್ಬೆ ನಿವಾಸಿ, ಸಂತ ಫಿಲೋಮಿನಾ ಪ್ರೌಢಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎನ್.ಡಿ.ಎಸ್. ಎಂದೇ ಖ್ಯಾತರಾಗಿದ್ದ ಸಿರ್ಲೋಯಿಸ್ ಮಸ್ಕರೇನಸ್ (82 ವ.) ಅವರು ಆ. 3ರಂದು ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಮಡಿಕೇರಿಯವರಾದ ಸಿರ್ಲೋಯಿಸ್ ಮಸ್ಕರೇನಸ್ ಅವರ ಹುಟ್ಟಿದ ದಿನವೂ ಆಗಸ್ಟ್ 3 ಆಗಿತ್ತು.
ಮೊದಲಿಗೆ ನ್ಯಾಷನಲ್ ಡಿಸಿಪ್ಲೀನ್ ಸ್ಕೀಮ್ (ಎನ್.ಡಿ.ಎಸ್.)ನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 27 ವರ್ಷಗಳ ಕಾಲ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ದುಡಿದಿದ್ದರು. ಇದೇ ಸಂದರ್ಭ ಪ್ರೌಢಶಾಲೆಯ ಬಾಲಕರ ಹಾಸ್ಟೆಲ್’ನ ವಾರ್ಡನ್ ಆಗಿ, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ ದರ್ಬೆ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ರೋಸ್ಲಿನ್ ಹಾಗೂ ಮೂರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯ ವಿಧಿವಿಧಾನಗಳು ನಾಳೆ ಆಗಸ್ಟ್ 5ರಂದು ಮಧ್ಯಾಹ್ನ ಏಳ್ಮುಡಿ ಚಾಪೆಲ್’ನಲ್ಲಿ ನೆರವೇರಲಿದೆ ಎಂದು ತಿಳಿದುಬಂದಿದೆ.




































