ಪುತ್ತೂರು: ನೆಹರುನಗರ ಕಲ್ಲೇಗದ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಮಾಲಕ ವಿಶ್ವಾಸ್ (37 ವ.) ಅವರು ಜುಲೈ 28 ರಂದು ತನ್ನದೇ ವೆಲ್ಡಿಂಗ್ ಕಚೇರಿಯ ಒಳಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಕಲ್ಲೇಗದ ಗಣೇಶ್ ಬಾಗ್ ನಿವಾಸಿಯಾಗಿರುವ ವಿಶ್ವಾಸ್ ಅವರು ತಮ್ಮ ಮನೆ ಸಮೀಪವೇ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಎಂಬ ಹೆಸರಿನಲ್ಲಿ ಹಲವು ವರ್ಷಗಳಿಂದ ಉದ್ಯಮ ನಿರ್ವಹಿಸುತ್ತಿದ್ದರು.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.