ಪುತ್ತೂರು ಮೂಲದ ಸಕಲೇಶಪುರ ನಿವಾಸಿ ಕೆ. ವಸಂತ ಆಚಾರ್ಯ (61 ವ.) ಜುಲೈ 27ರಂದು ಹೃದಯಾಘಾತದಿಂದ ಮೃತಪಟ್ಟರು.
ಮನೆಯಲ್ಲಿ ಹೃದಯ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಕೊನೆಯುಸಿರೆಳೆದರು.
ಅವರು ಸಕಲೇಶಪುರದಲ್ಲಿ ಮಂಗಳಾ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ವಿಶ್ವಕರ್ಮ ಸಮಾಜದ ಸಂಘಟನೆಯಲ್ಲೂ ಸಕ್ರೀಯರಾಗಿದ್ದರು.
ಮೃತರು ಪತ್ನಿ ಮೀನಾಕ್ಷಿ, ಪುತ್ರ ನಿಕಿತ್, ಪುತ್ರಿ ನಿಶ್ಮಿತಾ, ಅಳಿಯ ರವಿ, ಇಬ್ಬರು ಮೊಮ್ಮಕ್ಕಳು, ಸಹೋದರ ಪುತ್ತೂರು ಶಮಾ ಜ್ಯುವೆಲ್ಲರ್ಸ್ ಮಾಲಕ ನಾಗೇಶ್ ಆಚಾರ್ಯ, ಸಹೋದರಿ ಲಲಿತಾ, ಭಾವಂದಿರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.