ಪುತ್ತೂರು: ಉದ್ಯಮಿ ಬನ್ನೂರು ನಿವಾಸಿ ಸೀತಾರಾಮ ಶೆಟ್ಟಿ (65 ವ.) ಅವರು ಮಂಗಳವಾರ ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಅಪ್ಪಟ ಕನ್ನಡ ಪ್ರೇಮಿಯಾಗಿದ್ದ ಇವರು, ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜ ವಿತರಿಸುತ್ತಿದ್ದರು. ಕನ್ನಡದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದ ಇವರು, ಯಕ್ಷಗಾನ ಪ್ರೇಮಿಯೂ ಆಗಿದ್ದರು. ದಿ. ಚಿದಾನಂದ ಕಾಮತ್ ಕಾಸರಗೋಡು ಅವರ ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಇದರ ಎಲ್ಲಾ ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿದ್ದರು.
ಪುತ್ರರಾದ ಉದ್ಯಮಿ ರೋಶನ್ ರೈ, ರೋಹಿತ್, ಪುತ್ರಿ ರೋಜಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.