Gl
ನಿಧನ

ತುಳುರಂಗಭೂಮಿ‌ ಕಲಾವಿದ ಮೌನೇಶ ಆಚಾರ್ಯ ಮಾಣಿ ನಿಧನ!

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ : ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ‌ ಕಲಾವಿದ, ಕಾಪಿಕಾಡು‌ ನಿವಾಸಿ ಮೌನೇಶ ಆಚಾರ್ಯ ಮಾಣಿ(44) ಇವರು ಮಂಗಳವಾರ ಮುಂಜಾನೆ ತಮ್ಮ‌ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

rachana_rai
Pashupathi
akshaya college
Balakrishna-gowda

ಚಿನ್ನದ ಕೆಲಸ‌ಮಾಡುತ್ತಿದ್ದ ಇವರು ಜೊತೆಗೆ ಮನೆಸಮೀಪವೇ ಚಿಕ್ಕ‌ ದಿನಸಿ‌ ಅಂಗಡಿ ನಡೆಸುತ್ತಿದ್ದರು. ಹಾಸ್ಯಪ್ರಜ್ಞೆ ಉಳ್ಳವರಾಗಿದ್ದ ಇವರು ಜಯಂ ಕಲಾನಿಕೇತನ ಮಾಣಿ ನೃತ್ಯತಂಡದಲ್ಲಿ ಕಲಾವಿದರಾಗಿದ್ದ ಇವರು ಕಲಾಮಾತೆ ನಾಗನವಳಚ್ಚಿಲ್ ತಂಡದ ಕಲಾವಿದರಾಗಿದ್ದು, ಶಾಂತರಾಮ್ ಕಲ್ಲಡ್ಕ ನಿರ್ದೇಶನದ ತುಳು ಅಪ್ಪೆಜೋಕ್ಲು ಕಲಾ ಬಳಗದ ನಾಟಕಗಳಲ್ಲಿಯೂ ಅಭಿನಯಿಸಿದ್ದರು.‌

pashupathi

ಪ್ರಸ್ತುತ ನಮ್ಮ‌ ಕಲಾವಿದರು ನೆಲ್ಯಾಡಿ ತುಳುನಾಟಕ ತಂಡದ ಕಲಾವಿದರಾಗಿದ್ದ ಇವರು, ಯುವ ಕಲಾವಿದ ಸಚಿನ್ ಮಾಣಿ ಯವರ ಹಲವು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದ ಇವರು ಸ್ನೇಹಜೀವಿ.

ಮೃತರು ತಾಯಿ, ಸಹೋದರ, ಪತ್ನಿ, ಪುಟ್ಟಮಗಳು ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts