ಪುತ್ತೂರು: ಪುತ್ತೂರು ಬಿಜೆಪಿ ಹಾಗೂ ಪುತ್ತೂರು ನಗರಸಭೆ ಮತ್ತೊಮ್ಮೆ ಆಘಾತಕ್ಕೊಳಗಾಗಿದೆ.
ಇತ್ತೀಚೆಗಷ್ಟೇ ನಗರಸಭಾ ಸದಸ್ಯ ರಮೇಶ್ ರೈ ಮೃತಪಟ್ಟ ಬೆನ್ನಲ್ಲೇ ಇದೀಗ ನಗರಸಭೆ ಸದಸ್ಯ ಶೀನಪ್ಪ ನಾಯ್ಕ ಅವರು ನಿಧನರಾಗಿದ್ದಾರೆ.
ಮುಕ್ರಂಪಾಡಿ ಸಮೂಪದ ಆನಂದಾಶ್ರಮ ಸಮೀಪದ ನಿವಾಸಿ ಶೀನಪ್ಪ ನಾಯ್ಕ ಅವರು ಅನಾರೋಗ್ಯದಿಂದ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ಅರು ತಿಂಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಬಳಿಕ ಅವರು ನಗರಸಭೆ ಸದಸ್ಯರಾಗಿ ಕೆಲಸಕ್ಕೆ ಮರಳಿದ್ದರು. ಇದೀಗ ಅವರು ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.