ಪುತ್ತೂರು ಸಂಚಾರ ಪೊಲೀಸ್ ಠಾಣೆ ಹೆಡ್‌ಾನ್ಸೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಗೂನಡ್ಕ ನಿವಾಸಿ ಶಿವ ಪ್ರಸಾದ್(೫೧ ವರ್ಷ )ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಇವರು ಕಡಬ, ಮಂಗಳೂರು ಹಾಗೂ ಇನ್ನಿತರ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಸುಲೋಚನಾ, ಪುತ್ರಿಯರಾದ ರಮ್ಯಾ, ಅರ್ಚನಾ, ಪುತ್ರ ತೇಜಸ್ ಬಂಧು ಮಿತ್ರರನ್ನು ಅಗಲಿದ್ದಾರೆ.
ಮುಂದಿನ ವರ್ಷದಲ್ಲಿ ಟ್ರಾಫಿಕ್ ವಿಭಾಗದಲ್ಲಿ ಎ ಎಸ್ ಐ ಭಡ್ತಿ ಹೊಂದಲಿದ್ದರು ಎಂದು ತಿಳಿದುಬಂದಿದೆ.