pashupathi
ನಿಧನ

ಕುತ್ತಾರ್: ಬೆಡ್’ಶೀಟ್ ಒಣಗಿಸುವಾಗ ಕಾಲು ಜಾರಿ ಬಿದ್ದ ಬಾಲಕಿ – 12ನೇ ಮಹಡಿಯಿಂದ ಕೆಳಗೆ ಬಿದ್ದು ಮೃತ್ಯು!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಸಿಲಿಕೋನಿಯಾ ವಸತಿ ಸಂಕೀರ್ಣದ 12ನೇ ಮಹಡಿಯಿಂದ ಬಾಲಕಿಯೋರ್ವಳು ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ವರದಿಯಾಗಿದೆ.

akshaya college

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರಿನಲ್ಲಿ ಈ ದುರ್ಘಟನೆ ನಡೆದಿದೆ,

ಯೇನೆಪೋಯ ವೈದ್ಯಕೀಯ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾಗಿರುವ ವೈದ್ಯ ದಂಪತಿ ಡಾ. ಮುಮ್ತಾಝ್ ಅಹ್ಮದ್ ಹಾಗೂ ಡಾ. ಕಮ್ರಾಜ್ ಅವರ ಪುತ್ರಿ ಹಿಬಾ ಐಮನ್ (15) ಮೃತಪಟ್ಟ ದುರ್ದೈವಿ ಬಾಲಕಿ.

18 ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12ನೇ ಮಹಡಿಯಲ್ಲಿ ವೈದ್ಯ ದಂಪತಿ ವಾಸವಾಗಿದ್ದರು. ರಾತ್ರಿ ವೈದ್ಯ ದಂಪತಿಗಳಿಬ್ಬರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆಂದು ತೆರಳಿದ್ದರು. ಈ ಸಂದರ್ಭ ಹಿಬಾ ಅವರು ಸ್ಟೂಲ್ ಇಟ್ಟು ಬೆಡ್ ಶೀಟ್ ಒಣಗಿಸಲು ಪ್ರಯತ್ನಿಸುವಾಗ, ಕಾಲುಜಾರಿ 12 ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ.

ಯೆನೆಪೋಯ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಹಿಬಾ ಅವರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.’

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts