ಕಡಬ: ಇಲ್ಲಿನ ನೂಜಿಬಾಳ್ತಿಲ ನಡುವಾಲು ಬದಿಬಾಗಿಲು ಶ್ರೀ ಹುಲಿ ಚಾಮುಂಡಿ ಮತ್ತು ಪರಿವಾರ ದೈವಸ್ಥಾನದ ಮೊಕ್ತೇಸರ, ಪಲಯಮಜಲು ಬಂಗೇರ ಕುಟುಂಬದ ಹಿರಿಯರು ಹಾಗೂ ಪಲಯಮಜಲು ಬಂಗೇರ ತರವಾಡು ಟ್ರಸ್ಟಿನ ಅಧ್ಯಕ್ಷ ಸಂಜೀವ ಬಂಗೇರ ನಡುವಾಲು (77 ವ.) ಏ. 25ರಂದು ಬೆಳಿಗ್ಗೆ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರ ಮುಂದಾಳತ್ವದಲ್ಲಿ ಶ್ರೀ ಹುಲಿ ಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಪುನರ್ ನಿರ್ಮಾಣಗೊಂಡು ಪುನರ್ ಪ್ರತಿಷ್ಠೆ ನಡೆದಿದೆ. ಪ್ರಸ್ತುತ ಪಲಯಮಜಲು ಕುಟುಂಬದ ದೈವಗಳ ದೈವಸ್ಥಾನ ಪುನರ್ ನಿರ್ಮಾಣ ಕೆಲಸ ನಡೆಯುತ್ತಿದೆ.
ಮೃತರು ಪತ್ನಿ ಭಾರತಿ ಹಾಗೂ ಪುತ್ರ ಸಂದೀಪ್ ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಕ್ರಿಯಾದಿ ಕಾರ್ಯಕ್ರಮ ಮೇ 7ರಂದು ಮಂಗಳೂರು ಮಂಗಳಾದೇವಿ ದೇವಸ್ಥಾನದ ಹಿಂಭಾಗದ ಮಲ್ಲಿಕೃಪಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.